ಪತ್ತೆಯಾಯಿತು ಶಿಕ್ಷಕಿಯ ಮೃತದೇಹ – ಮಗುವಿಗಾಗಿ ಮುಂದುವರಿದ ಶೋಧ ಕಾರ್ಯ‌

Suddi Sante Desk

ಕಲಬುರಗಿ –

ಶಿಕ್ಷಕಿಯೊಬ್ಬರು ಹೆತ್ತ ಮಗನೊಂದಿಗೆ ನಿನ್ನೆ ಕಲಬುರಗಿ ಯಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶಹಬಾದ್ ತಾಲ್ಲೂಕಿನ ಶಂಕರವಾಡಿ ಗ್ರಾಮದ ಕಾಗಿನಾ ನದಿಯಲ್ಲಿ ಈ ಒಂದು ಘಟನೆ ನಡೆದಿದೆ. ಕಡೇಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಶಾಂತಾ ಅವರೇ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ ಆಗಿದ್ದಾರೆ.ಭಂಕೂರು ನಿವಾಸಿಯಾಗಿರುವ ಇವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕುರಿತು ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕಿ‌ ಶೋಧ ನಡೆಸಿ ಇಂದು ಮತ್ತೆ ಹುಡುಕಾಟ ಮಾಡುವಾಗ ಇಂದು ಶಿಕ್ಷಕಿಯ ಮೃತ ದೇಹ ಪತ್ತೆಯಾಗಿದೆ

ಗೋಳಮೊಳಕೆ ಗ್ರಾಮದ ಬ್ರೀಡ್ಜ್ ಬಳಿ ಶವ ದೊರೆತಿದೆ. ಇನ್ನೂ ಮಗುವಿನ ಶವಕ್ಕಾಗಿ ಹುಡುಕಾಟ ನಡೆದಿದ್ದು ಪೊಲೀಸರು ಅಗ್ನಿಶಾಮಕ ದಳದ ಟೀಮ್ ನೊಂದಿಗೆ ಶೋಧ ನಡೆಸುತ್ತಿದ್ದು ಅತ್ತ ಪೊಲೀಸರು ಮುಂದಿನ ಕಾರ್ಯವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.