ಬೆಂಗಳೂರು –
ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಯಲ್ಲಿನ ಯುವತಿ ಕೊನೆಗೂ ಪ್ರತ್ಯಕ್ಷವಾಗಿದ್ದಾಳೆ.ಸಿಡಿ ರಿಲೀಸ್ ಆದ ಮೇಲೆ ಈವರೆಗೆ ಸಾಕಷ್ಟು ಪ್ರಮಾಣದಲ್ಲಿ ದೊಡ್ಡ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದ್ದ ಎರಡು ಪ್ರಶ್ನೆಗಳಾದ ಸಿಡಿ ರಿಲೀಸ್ ಮಾಡಿದ್ದು ಯಾರು, ಯುವತಿ ಎಲ್ಲಿದ್ದಾರೆ ಎರಡು ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಆ ಎರಡು ಪ್ರಶ್ನೆಗಳಿಗೆ ಸಿಡಿ ಯಲ್ಲಿನ ಯುವತಿಯೇ ಉತ್ತರ ನೀಡಿದ್ದಾರೆ.

ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಯುವತಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿಯೇ ಸಿಡಿ ಬಿಡುಗಡೆ ಮಾಡಿದ್ದಾರೆ. ಕೆಲಸ ಕೊಡಿಸುವುದಾಗಿ ಹೇಳಿ ನನ್ನ ಮಾನ ಹರಾಜು ಹಾಕಿದ್ದಾರೆ ಎಂದು ಗೃಹ ಸಚಿವರಿಗೆ ಮನವಿ ಮಾಡಿದ್ದಾಳೆ ಅಲ್ಲದೇ ಈ ಒಂದು ವಿಡಿಯೋ ಅನ್ನು ಅವರೇ ಬಿಡುಗಡೆ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾರೆ.
ನನಗೆ ಯಾವುದೇ ರಾಜಕೀಯ ನಾಯಕರ ಸಂಪರ್ಕ ಇಲ್ಲ. ನನ್ನ ಮಾನ, ಮರ್ಯಾದೆ ಹರಾಜಾಗಿದೆ. ನನ್ನ ತಂದೆ -ತಾಯಿ ಎರಡು ಬಾರಿ ನಾನು ಕೂಡ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ರಮೇಶ ಜಾರಕಿಹೊಳಿ ಕೆಲಸ ಕೊಡಿಸುವುದಾಗಿ ನನಗೆ ಮೋಸ ಮಾಡಿದ್ದಾರೆ. ಅವರೇ ಸಿಡಿ ಬಿಡುಗಡೆ ಮಾಡಿದ್ದಾರೆ. ಅದನ್ನು ಬಹಿರಂಗಪಡಿಸಿ ನನ್ನ ಮಾನ ಹರಾಜು ಹಾಕಿದ್ದಾರೆ. ವಿಡಿಯೋ ಯಾರು ಮಾಡಿದ್ದಾರೆ ನನಗೆ ಗೊತ್ತಿಲ್ಲ ಎಂದು ಯುವತಿ ಹೇಳಿದ್ದಾರೆ.

ಈವರೆಗೆ ಒಂದು ಹಂತಕ್ಕೆ ಬಂದಿದ್ದ ಈ ಒಂದು ಪ್ರಕರಣ ಈಗ ಯುವತಿಯ ಈ ಹೇಳಿಕೆಯಿಂದಾಗಿ ಇಡಿ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದಂತಾ ಗಿದ್ದು ತನಿಖೆ ಬಳಿಕವಷ್ಟೆ ಸತ್ಯಾಸತ್ಯತೆ ತಿಳಿಯಬೇಕಿದೆ.