ಬೆಂಗಳೂರು –
ಸೆಕ್ಸ್ ಸಿಡಿ ಪ್ರಕರಣದಲ್ಲಿ ಈಗಾಗಲೇ ಐದಾರು ಜನರನ್ನು ಬಂಧನ ಮಾಡಿದ್ದು ಇನ್ನೂ ಇತ್ತ ಸಿಡಿ ಯಲ್ಲಿನ ಯುವತಿ ಕೂಡಾ ಮಾತನಾಡಿ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದು ಇವೆಲ್ಲದರ ನಡುವೆ ಈ ಒಂದು ಪ್ರಕರಣದಲ್ಲಿ ಇನ್ನೂ ದೊಡ್ಡ ತಿಮಿಂಗಿಲ ಬಲೆಗೆ ಬಿದ್ದಿಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿ ಹೊಳಿ ಹೇಳಿದರು. ಬೆಂಗಳೂರಿನಲ್ಲಿ ಮಾತ ನಾಡಿದ ಅವರು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋ ದರ ರಮೇಶ್ ಜಾರಕಿಹೊಳಿ ಜೊತೆ ಚರ್ಚಿ ಸಿದ್ದು ಈಗಾಗಲೇ ದೂರನ್ನು ನೀಡಲಾಗಿದೆ ಎಂದರು.
ಇನ್ನೂ ಸಿಡಿ ಪ್ರಕರಣದ ಕಿಂಗ್ಪಿನ್ಗಳ ಬಗ್ಗೆಯೂ ಆದಷ್ಟು ಬೇಗ ದೂರು ನೀಡುತ್ತೇವೆ. ಕಿಂಗ್ಪಿನ್ ಗಳಿಗೆ ಸಹಕರಿಸಿದವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ದೊಡ್ಡ ತಿಮಿಂಗಿಲವನ್ನು ವಶಕ್ಕೆ ಪಡೆದಿಲ್ಲ ಎಂದರು
ನಾವು ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ, ಕಾನೂನು ಹೋರಾಟದಿಂದ ಹಿಂದೆ ಸರಿಯುವುದೂ ಇಲ್ಲ. ಆರೋಪಿಗಳಿಗೆ ಬುದ್ಧಿ ಕಲಿಸಬೇಕೆಂದರೆ ಎಲ್ಲರನ್ನೂ ಬಂಧಿಸಬೇಕು. ಸಾಕ್ಷ್ಯಾಧಾರಗಳನ್ನು ಖಾಸಗಿಯಾಗಿ ಸಂಗ್ರಹ ಮಾಡಲಾಗುತ್ತಿದೆ.ಯುವತಿ ಜೊತೆ ಇರುವ ಫೋಟೋ ಗಳು ಲಭ್ಯವಾಗಿವೆ. ಪಕ್ಕಾ ಎವಿಡೆನ್ಸ್ ಕಲೆಕ್ಟ್ ಮಾಡಿ ದೂರು ನೀಡುತ್ತೇವೆ ಎಂದರು.