ರಾಜ್ಯ ಸರ್ಕಾರಿ ನೌಕರರಿಗೆ ಸಂತೋಷದ ಸುದ್ದಿ ನೀಡಿದ ರಾಜ್ಯ ಸರ್ಕಾರ – ಸುತ್ತೋಲೆ ಹೊರಡಿಸಿ ಆದೇಶ…..

Suddi Sante Desk

ಬೆಂಗಳೂರು –

ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.ಹೌದು ಈ ಹಿಂದೆ ರಾಜ್ಯ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಅನಾಮಧೇಯ ಪತ್ರಗಳ ಮೂಲಕ ಆರೋಪ ಮಾಡುತ್ತಿದ್ದ ಪತ್ರಗಳಿಗೆ ಇದೀಗ ರಾಜ್ಯ ಸರ್ಕಾರ ಸಂಪೂರ್ಣವಾಗಿ ಬ್ರೇಕ್ ಹಾಕಿದೆ.ಹೌದುಇನ್ಮುಂದೆ ಮೂಕರ್ಜಿಗಳಿಗೆ ಮಾನ್ಯತೆ ಇಲ್ಲ ಎಂಬುದಾಗಿ ಖಡಕ್ ಆದೇಶದಲ್ಲಿ ಸೂಚಿಸಿದೆ. ಈ ಮೂಲಕ ಅಧಿಕಾರಿ,ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಪರಿಗಣಿ ಸದಂತೆಯೂ ಸುತ್ತೋಲೆಯಲ್ಲಿ ಸೂಚಿಸಿದೆ.

ಹೌದು ಈ ಹಿಂದೆ ಅನಾಮಧೇಯ ದೂರು ಪತ್ರಗಳು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ದೊಡ್ಡ ಪ್ರಮಾಣದ ತಲೆನೋವಾಗಿತ್ತು ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಈ ಕುರಿತಂತೆ ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದೆ.ಇನ್ಮುಂದೆ ಮೂಕರ್ಜಿಗಳನ್ನು ಪರಿಗಣಿಸಬಾರದು ವಿಳಾಸ ಇರುವ ದೂರುಗಳನ್ನ ಮಾತ್ರವೇ ಸ್ವೀಕರಿಸಬೇಕು.ಸೂಕ್ತ ದಾಖಲೆ ಇಲ್ಲದ ದೂರುಗಳ್ನು ಪರಿಗಣಿಸಬೇಡಿ.ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಮಾನ್ಯ ಮಾಡದಂತೆ ಸೂಚಿಸಿದೆ.ಈ ಹಿನ್ನಲೆಯಲ್ಲಿ ಇನ್ಮುಂದೆ ವಿಳಾಸ ಹೆಸರು ಇಲ್ಲದೇ ಯಾವುದೇ ಸರ್ಕಾರಿ ಅಧಿಕಾರಿ ನೌಕರರ ಮೇಲೆ ಅನಾಮಧೇಯ ಪತ್ರದಲ್ಲಿ ದೂರು ಕಳುಹಿಸಿದ್ರೇ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಮೂಕರ್ಜಿಗಳಿಗೆ ಮಾನ್ಯತೆ ಕೂಡ ನೀಡುವುದಿಲ್ಲ ಈ ಮೂಲಕ ರಾಜ್ಯದ ಸರ್ಕಾರಿ ನೌಕರಿಗೆ ಬಿಗ್ ರಿಲೀಫ್ ನೀಡಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.