ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರು – ರಾಜ್ಯದ ಯಾವ ಯಾವ ಜಿಲ್ಲೆಗಳಿಗೆ ಎಷ್ಟೇಷ್ಟು ಶಿಕ್ಷಕರು ಗೊತ್ತಾ ಕಂಪ್ಲೀಟ್ ಮಾಹಿತಿ…..

Suddi Sante Desk

ಬೆಂಗಳೂರ –

ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದ ಶಿಕ್ಷಣ ಸಚಿವರು ಈಗ ನೇಮಕಾತಿ ಕುರಿತೆಂತೆ ಆದೇಶವನ್ನು ಹೋರಡಿಸಿದ್ದಾರೆ.

ಹೌದು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್ ಆರ್ ಆದೇಶ ಹೊರಡಿಸಿದ್ದಾರೆ.

2021-22 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿ ಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ 18,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ.

ವರ್ಗಾವಣೆ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಖಾಲಿ ಹುದ್ದೆಗೆ ವರ್ಗಾವಣೆಗೊಂಡ ಶಿಕ್ಷಕರು ಕರ್ತವ್ಯಕ್ಕೆ ಹಾಜರಾದ ಕೂಡಲೇ ಅತಿಥಿ ಶಿಕ್ಷಕರನ್ನು ಸಂಬಂಧಪಟ್ಟ ಶಾಲೆಯಿಂದ ಬಿಡುಗಡೆ ಮಾಡಿ ತಾಲೂಕಿನ ಒಳಗೆ ಅಗತ್ಯ ಖಾಲಿ ಇರುವ ಶಾಲೆಯಲ್ಲಿ ಮುಂದುವರೆಸಲು ನಿಯಮಾ ನುಸಾರ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ವಹಿಸಲು ಸೂಚನೆ ನೀಡಿದ್ದಾರೆ.

ಹಲವು ಷರತ್ತಿನೊಂದಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ.ಇನ್ನೂ ಶಿಕ್ಷಕ ರಾಗಬೇಕು ಎಂದುಕೊಂಡಿದ್ದವರಿಗೆ ಸರ್ಕಾರ ಸಿಹಿ ಸುದ್ದಿ ಯೊಂದನ್ನು ನೀಡಿದ್ದು

ರಾಜ್ಯದ ಸರ್ಕಾರಿ ಶಾಲೆ ಗಳಲ್ಲಿ ಇವರು ಬೋಧನೆ ಮಾಡಲಿದ್ದು ಇದರ ಬದಲಿಗೆ ಖಾಯಂ ನೇಮಕಾತಿಗೆ ಒತ್ತು ಕೊಡಬೇಕಾಗಿತ್ತು ಈ ಕುರಿತಂತೆ ಸಂಘಟನೆ ಆಗ್ರಹ ಮಾಡಬೇಕಾಗಿತ್ತು ಎಂಬ ಕೂಗು ರಾಜ್ಯದ ಶಿಕ್ಷಕ ಸಮುದಾ ಯದಿಂದ ಕೇಳಿ ಬರುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.