ಧಾರವಾಡ –
ಗ್ರಾಮದಲ್ಲಿ ಹೊಸದಾಗಿ ಬಾರ್ ಆರಂಭವನ್ನು ವಿರೋಧಿಸಿ ಧಾರವಾಡದ ತಿರ್ಲಾಪೂರ ಗ್ರಾಮದಲ್ಲಿ ಪ್ರತಿಭಟನೆ ನಡೆಯುತ್ತಿದೆ.ಜಿಲ್ಲೆಯ ನವಲಗುಂದ ತಾಲ್ಲೂಕಿನ ಹರ್ಲಾಪೂರ ಗ್ರಾಮದಲ್ಲಿ ಈ ಒಂದು ಹೋರಾಟ ನಡೆಯುತ್ತಿದೆ.

ಗ್ರಾಮದಲ್ಲಿ ಅಶೋಕ ಬಾರ್ ಮತ್ತು ರೆಸ್ಟೋರೆಂಟ್ ನ್ನು ಹೊಸದಾಗಿ ಆರಂಭ ಮಾಡಲಾಗಿದೆ. ಇದರಿಂದ ಈ ಒಂದು ಬಾರ್ ನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡತಾ ಇದ್ದಾರೆ.

ಗ್ರಾಮದಲ್ಲಿ ಹೊಸದಾಗಿ ಆರಂಭ ಮಾಡಲಾಗಿರುವ ನೂತನ ಮಧ್ಯದ ಅಂಗಡಿಯನ್ನು ಯಾವುದೇ ಕಾರಣಕ್ಕೂ ಆರಂಭ ಮಾಡದಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದು ವಿರೇಶ ಸೊಬರದಮಠ ಅವರ ನೇತೃತ್ವದಲ್ಲಿ ಈ ಒಂದು ಪ್ರತಿಭಟನೆಯನ್ನು ಮಾಡ ಲಾಗುತ್ತಿದೆ.

ಸಧ್ಯ ಬಾರ್ ಮುಂದೆ ಪ್ರತಿಭಟನೆ ಮಾಡಲಾಗುತ್ತಿದ್ದು ಇತ್ತ ಆರಂಭಕ್ಕೆ ಅನುಮತಿ ತಗೆದುಕೊಂಡ ಮಳಿಗೆ ಯ ಮಾಲೀಕರು ಮುಂದೇನು ಮಾಡತಾರೆ ಎಂಬು ದನ್ನು ಕಾದು ನೋಡಬೇಕು.