ಧಾರವಾಡ –
ಪೊಲೀಸರು ಎಂದರೆ ಯಾವಾಗಲೂ ಹೇ ಅವರು ಹಾಗೇ ಅವರು ಹೀಗೆ ಬಿಡೊ ಮಾರಾಯ ಅನ್ನುವುದೇ ಹೆಚ್ಚು. ದಿನದ 24 ಘಂಟೆಗಳ ಕಾಲ ಬಿಡುವಿಲ್ಲದೆ ನಮ್ಮ ಮಧ್ಯೆ ಎಷ್ಟೋ ಕೆಲಸ ಕಾರ್ಯ ಮಾಡಿದರು ಅವರ ಬಗ್ಗೆ ಅವರನ್ನು ನಾವುಗಳು ಅವರನ್ನು ಬೇರೆ ದೃಷ್ಟಿಯಿಂದಲೇ ನೋಡುತ್ತೆವೆ ಕಾಣುತ್ತೇವೆ ಇವರಲ್ಲಿಯೂ ಕೆಲವೊಂದಿಷ್ಟು ಮಾನವೀಯತೆ ಗುಣಗಳು ಸಾಮಾಜಿಕ ಕಾಳಜಿ ಇರುತ್ತವೆ ಎನ್ನೊದಕ್ಕೆ ಧಾರವಾಡ ಸಂಚಾರಿ ಪೊಲೀಸರೇ ಸಾಕ್ಷಿ.

ಹೌದು ಇದಕ್ಕೆ ಈ ಒಂದು ಚಿತ್ರಣವೇ ಸಾಕ್ಷಿ. ಧಾರವಾಡದ ದಾಸನಕೊಪ್ಪ ವೃತ್ತದಲ್ಲಿನ ಎರಡು ಸಿಗ್ನಲ್ ಕಂಬಗಳು ವಾಲಿದ್ದವು ಇನ್ನೇನು ಬಿದ್ದು ಹೋಗುತ್ತವೆ ಇದರಿಂದಾಗಿ ಹಾಳಾಗುತ್ತವೆ ಅಲ್ಲದೇ ಸಿಗ್ನಲ್ ಇಲ್ಲದೆ ತೊಂದರೆ ಆಗುತ್ತದೆ ಎಂದುಕೊಂಡು ಧಾರವಾಡ ಸಂಚಾರಿ ಇನ್ಸ್ಪೆಕ್ಟರ್ ಮಲಗೌಡ ನಾಯ್ಕರ ಮಾರ್ಗದರ್ಶನದಲ್ಲಿ ಇಬ್ಬರು ಸಂಚಾರಿ ಠಾಣೆ ಸಿಬ್ಬಂದಿ ಕಂಬಗಳನ್ನು ದುರಸ್ತಿ ಮಾಡಿದ್ದಾರೆ.

ಲಕ್ಷ್ಮಣ ಲಮಾಣಿ, ಲಿಂಗರಾಜ ನಾಯಕ ಇಬ್ಬರು ಸಿಬ್ಬಂದಿ ಗಳು ಒಳ್ಳೆಯ ಕೆಲಸವನ್ನು ಮಾಡಿದರು ವಾಲಿದ್ದ ಎರಡು ಸಿಗ್ನಲ್ ಕಂಬಗಳನ್ನು ತಗೆದು ಮರಳಿ ತೆಗ್ಗು ತಗೆದು ಕಾಂಕ್ರೀಟ್ ಹಾಕಿದ್ದಾರೆ.

ಅವರಿವರ ಬಳಿ ಸಹಾಯವನ್ನು ಪಡೆದುಕೊಂಡ ಇವರು ಎರಡು ಕಂಬಗಳಿಗೆ ಮರಳಿ ಜೀವ ತುಂಬಿದ್ದಾರೆ

ಬಿಡುವಿಲ್ಲದ ತಮ್ಮ ದಿನದ ಕರ್ತವ್ಯದ ನಡುವೆಯೂ ಕೂಡಾ ಇವರು ಇಂಥಹ ಸಮಾಜಮುಖಿ ಕಾರ್ಯ ವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ದ್ದಾರೆ. ಈಗಲಾದರೂ ನಮ್ಮ ನಡುವೆ ಇರುವ ಪೊಲೀಸರಿಗೆ ನಾವು ಗೌರವ ಕೊಡೊದನ್ನು ಮಾತ್ರ ಮರಿಯಬಾರ ದು.ಏನೇ ಆಗಲಿ ಧಾರವಾಡ ಸಂಚಾರಿ ಪೊಲೀಸರು ನಿಜವಾಗಿಯೂ ಒಳ್ಳೆಯ ಕೆಲಸ ಮಾಡಿದ್ದಾರೆ. ಇನ್ಸ್ಪೆಕ್ಟರ್ ಮಾರ್ಗದರ್ಶನದಲ್ಲಿ ಮಾಡಿದ ಲಕ್ಷ್ಮಣ ಲಮಾಣಿ, ಲಿಂಗರಾಜ ನಾಯಕ ಇವರಿಗೆ ಅಭಿನಂದನೆಗಳು