ಶಾಲೆಯಲ್ಲಿ ನೂರರ ಗಡಿ ದಾಟಿದ ಕರೋನ ಪಾಸಿಟಿವ್ ದಿನದಿಂದ ದಿನಕ್ಕೆ ಶಾಲೆಯಲ್ಲಿ ಆತಂಕ…..

Suddi Sante Desk

ಚಿಕ್ಕಮಗಳೂರು –

ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಸೀಗೋಡಿನ ಜವಾಹರ್ ನವೋದಯ ವಿದ್ಯಾಲಯ ವಸತಿ ಶಾಲೆಯಲ್ಲಿ ಕರೋನ ಸ್ಫೋಟಗೊಂಡಿದೆ‌ ಕೊರೋನಾ ಈಗ ಮತ್ತಷ್ಟು ಜನರಿಗೆ ಹರಿಡಿದೆ.

ನಿನ್ನೆ 59 ವಿದ್ಯಾರ್ಥಿಗಳು ಮತ್ತು 10 ಸಿಬ್ಬಂದಿ ಸೇರಿದಂತೆ 69 ಮಂದಿಗೆ ಪಾಸಿಟಿವ್ ಬಂದಿತ್ತು.ಈಗ ಇದು 101ಕ್ಕೆ ಏರಿಕೆಯಾಗಿದೆ.ಇದರಲ್ಲಿ 90 ವಿದ್ಯಾರ್ಥಿಗಳು ಮತ್ತು 11 ಸಿಬ್ಬಂದಿ ಇದ್ದಾರೆ.ಇವರ ಸ್ಯಾಂಪಲ್‌ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳಿಸಲಾಗುತ್ತೆ ಅಂತ ಚಿಕ್ಕಮಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಉಮೇಶ್ ಹೇಳಿದ್ದಾರೆ. ಜಿನೋಮ್ ಸೀಕ್ವೆನ್ಸ್ ನಲ್ಲಿ ಇವರಿಗೆ ತಗುಲಿರೋದು ಒಮೈಕ್ರಾನಾ ಅಲ್ವಾ ಅನ್ನೋದು ಗೊತ್ತಾಗುತ್ತೆ. ಈಗಾಗಲೇ ಶಾಲೆಯನ್ನ ಸೀಲ್ ಡೌನ್ ಮಾಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.