ಬೆಂಗಳೂರು
ರಾಜ್ಯ ರಾಜಕೀಯದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಭಾರಿ ಸಂಚಲನ ಮೂಡಿಸಿದೆ. ಇದರ ಮುಂದುವ ರಿದ ಭಾಗ ಎಂಬಂತೆ ಶನಿವಾರ ಸಂಜೆ ಅಸಲಿ ಆಟ ಶುರುವಾಗುತ್ತೆ, ನನ್ನ ಜೇಬಿನಲ್ಲಿ ಸಾಕ್ಷಿ ಇಟ್ಟುಕೊಂಡಿ ದ್ದೇನೆ, ಸಮಯನೋಡಿ ಬಿಡುಗಡೆ ಮಾಡ್ತೀನಿ ಎಂದು ಬಹಿರಂಗವಾಗಿ ಹೇಳುವ ಮೂಲಕ ಕುತೂಹಲ ಮೂಡಿಸಿದ್ದ ರಮೇಶ್ ಜಾರಕಿಹೊಳಿ ಕೊನೆಗೂ ಡಿಕೆಶಿ ವಿರುದ್ಧ ಸಿಡಿದೆದ್ದಿದ್ದಾರೆ.

ಇಂದು ಬೆಳಗ್ಗೆಯಿಂದ ಅಜ್ಞಾತ ಸ್ಥಳದಲ್ಲೇ ಇದ್ದ ರಮೇಶ್ ಜಾರಕಿಹೊಳಿ ಸಂಜೆ ಸದಾಶಿವನಗರದ ಮನೆಗೆ ಆಗಮಿಸಿದರು.ನಂತರ ಹೊರಬಂದ ರಮೇಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ನಾನು ನಿನ್ನೆ ಹೇಳಿದಂತೆ ಇಂದು ನಾನು ಕೆಲ ಮಹತ್ವದ ಮಾಹಿತಿಯನ್ನ ಹೊರಹಾಕು ತ್ತೇನೆ ಅಂದಿದ್ದೆ.

ಡಿಕೆಶಿಯೇ ಕಿಂಗ್ ಪಿನ್ ನರೇಶ್ ತನ್ನ ಸಂಬಂಧಿ ಎಂದು ಹೇಳಿಕೊಂಡಿದ್ದಾನೆ. ಯುವತಿ ಪೋಷಕರು ಕೂಡ ಮಹಾನಾಯಕನ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಆ ಮಹಾನಾಯಕ ರಾಜಕೀಯಕ್ಕೆ ನಾಲಾಯಕ್. ಅವನೆಂಥ ದೊಡ್ಡ ಗಂಡಸು, ಅವನು ಗಂಡಸಲ್ಲ, ನಾನು ಗಂಡು ಎಂದು ಡಿ.ಕೆ. ಶಿವಕುಮಾ ರ್ ವಿರುದ್ಧ ಕಿಡಿಕಾರಿದರು.
ಡಿಕೆಶಿ ಷಡ್ಯಂತ್ರಕ್ಕೆ ಕ್ಷಮೆಯೇ ಇಲ್ಲ. ಕನಕಪುರದಲ್ಲಿ ಡಿಕೆಶಿಯನ್ನ ಸೋಲಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳ ಲಾಗುತ್ತೆ. ಅವನಂಥ ಗಾಂಡು ರಾಜಕಾರಣಿ ಯಾರೂ ಇಲ್ಲ. ಎಂದು ಅವಾಚ್ಯ ಶಬ್ದಗಳಿಂದ ರಮೇಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು. ನಾಳೆ ಡಿಕೆಶಿ ವಿರುದ್ಧ ದೂರು ನಿಡ್ತೀನಿ. ಯುವತಿಯ ಪೋಷಕರ ಹೇಳಿಕೆ ಬಳಿಕ ಗೊತ್ತಾಯ್ತು ಆ ಮಹಾನಾಯಕ ರಾಜಕೀಯಕ್ಕೆ ನಾಲಾಯಕ್ ಎಂದು ಏಕ ವಚನದಲ್ಲೇ ನಿಂದಿಸಿದರು.

ಹೆಣ್ಣನ್ನು ಮುಂದಿಟ್ಟುಕೊಂಡು ಷಡ್ಯಂತ್ರ ಮಾಡಿ ದ್ದಾನೆ ಡಿಕೆಶಿ. ಅವನಿಗೆ ನಾನೇಕೆ ಹೆದರಲಿ? ಗೋಕಾಕ್ ನಲ್ಲಿ ಚುನಾವಣೆಗೆ ನನ್ನ ತಮ್ಮನನ್ನು ನಿಲ್ಲಿಸ್ತೀನಿ, ಕನಕಪುರದಲ್ಲಿ ನಾನೇ ನಿಲ್ತೀನಿ. ನನ್ನ ಹತ್ತಿರ ಒಟ್ಟು 11 ಸಾಕ್ಷ್ಯಗಳಿವೆ. ಅದನ್ನು ಎಸ್ಐಟಿಗೆ ಒಪ್ಪಿಸುತ್ತೇನೆ. ಯುವತಿ ಸತ್ತರೆ ಅದಕ್ಕೆ ಡಿಕೆಶಿಯೇ ಹೊಣೆ ಎಂದರು
