ಚಿಕ್ಕಬಳ್ಳಾಪುರ ಜಿಲ್ಲೆಯಿಂದ ನಾಲ್ವರು ಶಿಕ್ಷಕರು ರಾಜ್ಯ ಮಟ್ಟದ ಗ್ರಾಮೀಣ ಶಿಕ್ಷಣ ರತ್ನ ಪ್ರಶಸ್ತಿಗೆ ಶಿಕ್ಷಕ ಬಂಧುಗಳಿಂದ ಅಭಿನಂದನೆ ಶುಭಾಶಯ ಮಹಾಪೂರ…..

Suddi Sante Desk

ಚಿಕ್ಕಬಳ್ಳಾಪುರ –

ರಾಜ್ಯ ಗ್ರಾಮೀಣ ಪ್ರಾಥಮಿಕ ಶಿಕ್ಷಕರ ಸಂಘದಿಂದ ಕೊಡಮಾಡುವ ರಾಜ್ಯ ಮಟ್ಟದ ಗ್ರಾಮೀಣ ಶಿಕ್ಷಣ ರತ್ನ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ನಾಲ್ವರು ಶಿಕ್ಷಕ ಬಂಧುಗಳು ಆಯ್ಕೆಯಾಗಿದ್ದಾರೆ.ಹೌದು ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾಧನೆಯನ್ನು ಮಾಡಿದ ಶಿಕ್ಷಕ ಬಂಧುಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ

ಹೌದು ಚಿಕ್ಕಬಳ್ಳಾಪುರ ಜಿಲ್ಲೆಯಿಂದ 4 ಮಂದಿ ಆದರ್ಶ ಶಿಕ್ಷಕರಿಗೆ ರಾಜ್ಯ ಗ್ರಾಮೀಣ ಶಿಕ್ಷಕರ ಸಂಘದಿಂದ ರಾಜ್ಯ ಮಟ್ಟದ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಡಿಸೆಂಬರ್ 25 ರಂದು ಹುಬ್ಬಳ್ಳಿಯ ಸಿದ್ದರೂಢ ಸ್ವಾಮಿ ಸಭಾಂಗಣದಲ್ಲಿ ರಾಜ್ಯ ಗ್ರಾಮೀಣ ಪದಾಧಿಕಾರಿಗಳ ಸಮಾವೇಶದಲ್ಲಿ ಈ ಒಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ

ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಬಂಧುಗಳು

K. N. ಚೆನ್ನ ಬಸವಯ್ಯ ಮುಖ್ಯ ಶಿಕ್ಷಕರು GHPS- ಗುಂಗೀರ್ಲಹಳ್ಳಿ ಪೋಷಟ್ಟಹಳ್ಳಿ ಕ್ಲಸ್ಟರ್ ಚಿಕ್ಕಬಳ್ಳಾಪುರ ಇವರಿಗೆ ಪ್ರಶಸ್ತಿ ಒಲಿದು ಬಂದಿದೆ

ಇನ್ನೂ ಜಿಲ್ಲೆಯ ಚಿಂತಾಮಣಿ ತಾಲೂಕಿನ GHPS K.R. ಸುಧರ್ಮ ಬಡ್ತಿ ಮುಖ್ಯ ಶಿಕ್ಷಕರು -ಇರಗಂಪಲ್ಲಿ ಇವರಿಗೂ ಕೂಡಾ ಪ್ರಶಸ್ತಿ ಒಲಿದು ಬಂದಿದ್ದು ಸಾಧನೆಗೆ ಹಿಡಿದ ಕೈಗನ್ನ ಡಿಯಾಗಿದೆ.

ಇನ್ನೂ ಮತ್ತೊರ್ವ ಶಿಕ್ಷಕ ಚೇಳೂರು ತಾಲೂಕಿನ ಚೇಳೂ ರಿನ ಬಡ್ತಿ ಮುಖ್ಯ ಶಿಕ್ಷಕರಾದ T. ವೆಂಕಟರವಣಪ್ಪ ರವರಿಗೆ ಕೂಡಾ ಈ ಒಂದು ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ

ಇನ್ನೂ ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯದ ದೈಹಿಕ ಶಿಕ್ಷಕಿ ಹಾಗೂ ಪ್ರಭಾರಿ ಮುಖ್ಯ ಶಿಕ್ಷಕಿ ಯಾದ ಪಿ.ವಿ.ರಮಾ ರವರಿಗೆ ಗ್ರಾಮೀಣ ಶಿಕ್ಷಕರ ಸಂಘದ ಪ್ರಶಸ್ತಿ ಲಭಿಸಿದೆ

ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಶಾಲಾ ಸರ್ವತೋ ಮುಖ ಅಭಿವೃದ್ಧಿಗೆ ವಿಶೇಷ ಸಾಧನೆಗಳನ್ನು ಮಾಡಿ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿಗೆ ಭಾಜನರಾಗಿರುವುದರಿಂದ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಧ್ಯಕ್ಷರಾದ ಅಶೋಕ್ M ಸಜ್ಜನ್ ಪ್ರಧಾನಕಾರ್ಯದರ್ಶಿ ಗಳಾದ ಮಲ್ಲಿಕಾರ್ಜುನ C ಉಪ್ಪಿನ್,ಎಲ್ ಐ ಲಕ್ಕಮ್ಮನವರ,ರಾಜ್ಯ ಘಟಕದ ಸರ್ವ ಪದಾಧಿಕಾರಿಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಹಾ ಅಧ್ಯಕ್ಷ ರಾದ R. ನಾರಾಯಣಸ್ವಾಮಿ ಚಿಂತಾಮಣಿ ಪ್ರಧಾನ ಕಾರ್ಯದರ್ಶಿ M.R. ಸುಬ್ಬಾ ರೆಡ್ಡಿ ಹಾಗೂ ಜಿಲ್ಲಾ ಪದಾಧಿ ಕಾರಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅಧ್ಯಕ್ಷರುಗಳು ಕಾರ್ಯದರ್ಶಿ ಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ. ಹಾಗೇ ಜಿಲ್ಲೆಯ ನಾಲ್ಕು ಜನ ಶಿಕ್ಷಕ ಬಂಧುಗಳಿಗೆ ಪ್ರಶಸ್ತಿ ಯನ್ನು ನೀಡಿ ಗೌರವಿಸಿದಕ್ಕೆ ಚಿಕ್ಕ ಬಳ್ಳಾಪುರ ಜಿಲ್ಲೆಯ ಎಲ್ಲಾ ಗ್ರಾಮೀಣ ಶಿಕ್ಷಕರ ಪರವಾಗಿ ರಾಜ್ಯ ಘಟಕದ ನಾಯಕರಿಗೆ ಧನ್ಯವಾದಗಳನ್ನು
R. ನಾರಾಯಣಸ್ವಾಮಿ ಚಿಂತಾಮಣಿ ಜಿಲ್ಲಾಧ್ಯಕ್ಷರು
M.R. ಸುಬ್ಬಾರೆಡ್ಡಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಜಿಲ್ಲಾ ಘಟಕದ ಪರವಾಗಿ ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.