ಧಾರವಾಡ –
ಹೋಳಿ ಹಬ್ಬದ ಸಂಭ್ರಮದಲ್ಲಿದ್ದ ಧಾರವಾಡದಲ್ಲಿ ಒಂದರ ಮೇಲೊಂದು ಬೈಕ್ ಅಪಘಾತಗಳಾಗುತ್ತಿವೆ ಬೆಳ್ಳಂ ಬೆಳಿಗ್ಗೆ ಬೈಕ್ ವೊಂದು ಅಪಘಾತವಾಗಿ ಬೈಕ್ ಸವಾರ ಕಾರ್ತಿಕ್ ಸಾವಿಗೀಡಾದ ಬೆನ್ನಲ್ಲೇ ಮತ್ತೆರಡು ಬೈಕ್ ಗಳು ಅಪಘಾತಕ್ಕಿಡಾಗಿವೆ.

ನಗರದ SDM ಬಳಿ ಸ್ಕೂಟಿ ಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದು ಕೂಡಲೇ SDM ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನೂ ಇತ್ತ KMF ಬಳಿ ಮತ್ತೊಂದು ಅಪಘಾತ ವಾಗಿದೆ.ವಿದ್ಯುತ್ ಕಂಬಕ್ಕೆ ಬೈಕ್ ವೊಂದು ಡಿಕ್ಕಿ ಯಾಗಿದೆ. ಅಬ್ದುಲ್ ಮತ್ತು ಶಿವಾನಂದ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿ ದೆ.

ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಗಳಾದ ರಾಜರಾಜ ಪಾಟೀಲ್ ಮತ್ತು ಈರಣ್ಣ ಲಕ್ಕಮ್ಮನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ಅಪಘಾತಕ್ಕೆ ಪೊಲೀಸರು ಕಾರಣವನ್ನು ಹುಡುಕಾಡುತ್ತಿದ್ದಾರೆ