CM ಮುಂದೆಯೇ ರಣರಂಗವಾದ ರಾಜಕೀಯ ನಾಯಕರ ಪೈಟ್ ಜನರ ಮುಂದೆ ಮಾದರಿ ಆಗಬೇ ಕಾದವರಿಂದಲೇ ಕೈ ಕೈ ಮಿಗಿಲಾಟ ಯಾಕಲೇ ಏನಲೇ ಸಾಕ್ಷಿಯಾದರು CM ಸೇರಿದಂತೆ ಹಲವು ನಾಯಕರು…..

Suddi Sante Desk

ರಾಮನಗರ –

ರಾಜಕೀಯ ರಣರಂಗವಾದ ಕಾರ್ಯಕ್ರಮವೊಂದು ರಾಮನಗರ ದಲ್ಲಿ ಕಂಡು ಬಂದಿದೆ.ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ವನ್ನು ರಾಮನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿ ಕೊಳ್ಳಲಾಗಿತ್ತು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವ ಸಂಪುಟದ ಹಲವು ಸಚಿವರು ಬೇರೆ ಬೇರೆ ಪಕ್ಷದ ಶಾಸಕರು ಸಂಸದ ಡಿ ಕೆ ಸುರೇಶ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ಈ ಒಂದು ಕಾರ್ಯಕ್ರಮದ ಆರಂಭದಲ್ಲಿ ಕಾರ್ಯಕ್ರಮ ವನ್ನು ಉದ್ದೇಶಿಸಿ ಸಚಿವ ಅಶ್ವಥ್ ನಾರಾಯಣ ಮಾತನಾ ಡಲು‌ ಆರಂಭವನ್ನು ಮಾಡಿದರು.ಮಾತನಾಡುತ್ತಾ ಮಾತ ನಾಡುತ್ತಾ ಅಭಿವೃದ್ಧಿ ಕಾರ್ಯಗಳ ಕುರಿತು ಈವರೆಗೆ ಇಲ್ಲಿ ಅಭಿವೃದ್ಧಿಯನ್ನು ಯಾರು ಮಾಡಿಲ್ಲಾ ನಮ್ಮ ಬಿಜೆಪಿ ಪಕ್ಷ ಮಾತ್ರ ಮಾಡಿದೆ ಎಂದರು.ಹೀಗೆ ಹೇಳುತ್ತಿದ್ದಂತೆ ಇತ್ತ ವೇದಿಕೆಯ ಮೇಲೆ ಕುಳಿತುಕೊಂಡಿದ್ದ ಸಂಸದ ಡಿ ಕೆ ಸುರೇಶ್ ಗರಂ ಆಗಿ ಈ ವೇಳೆ ಅಶ್ವಥ್ ನಾರಾಯಣ್ ಬಳಿಗೆ ಬಂದು ಗಲಾಟೆ ಮಾಡಿದರು

ಕಾರ್ಯಕ್ರಮದಲ್ಲಿ ಅಶ್ವಥ್ ನಾರಾಯಣ್ ಅವರಿಂದ ವಯಕ್ತಿಕ ಟೀಕೆ ಎಂಬ ಆರೋಪ ಮಾತುಗಳಿಂದ ಆಕ್ರೋಶ ಗೊಂಡ ಡಿ ಕೆ ಸುರೇಶ್ ಅವರು ಅಶ್ವಥ್ ನಾರಾಯಣ ಅವರೊಂದಿಗೆ ಮಾತಿನ ಚಕಮಕಿ ಮಾಡಿ ಪರಸ್ಪರ ಹೊಡೆ ದಾಟದ ಮಟ್ಟಿಗೆ ಹೋದರು.ಸ್ಟೇಜ್ ಮೇಲ್ ಸಿಎಂಮುಂದೆ ಚಪ್ಪಾಟ್ಟೆ ಹಾಕಿ ಸಂಸದ ಪ್ರತಿಭಟನೆ ಕುಳಿತುಕೊಂಡರು.
ಅಶ್ವಥ್ ನಾರಾಯಣ್ ಮಾತಿಗೆ ಗರಂ ಆಗಿ ಸಂಸದ ಡಿ.ಕೆ.ಸುರೇಶ್.ಅಶ್ವಥ್ ನಾರಾಯಣ್ ಮಾತನಾಡುತ್ತಿದ್ದ ಮೈಕ್ ಬಳಿಗೆ ಬಂದು ಡಿ.ಕೆ.ಸುರೇಶ್.ಅಭಿವೃದ್ಧಿ ಯಾರು ಮಾಡಿಲ್ಲಾ ನಮ್ಮ ಬಿಜೆಪಿ ಪಕ್ಷ ಮಾತ್ರ ಮಾಡಿರುವುದು ಎಂದರು.

ಈ ವೇಳೆ ಅಶ್ವಥ್ ನಾರಾಯಣ್ ಬಳಿಗೆ ಬಂದು ಏನ್ ಅಭಿವೃದ್ಧಿ ಮಾಡಿದ್ದೀಯಾ ಅಂತಾ ಪ್ರಶ್ನೆ ಮಾಡುತ್ತಾ ಮಾತಿಗೆ ಮಾತು ಬೆಳೆದು ವೇದಿಕೆಯ ಮೇಲೆ ಕೈ ಕೈ ಮಿಗಿಲಾಯಿಸಿದ ಡಿ.ಕೆ.ಸುರೇಶ್ ಗೆ ಎಂ.ಎಲ್‌.ಸಿ. ರವಿ ಸಾಥ್ ನೀಡಿದರು ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಇಷ್ಟೇಲ್ಲಾ ರಂಪಾಟ ಕಂಡು ಬಂದಿತು.



ಇನ್ನೂ ಇದೇ ಸಂಸದ ಡಿಕೆ ಸುರೇಶ್ ಮಾತನಾಡಿ ನೀವೂ ಅಧಿಕಾರಕ್ಕಾಗಿ ಬಂದಿದ್ದೀರಾ ನಾವೂ ಕೂಡ ಸ್ವಾಗತ ಮಾಡ್ತೇವೆ.ರೇಷ್ಮೆಗೆ ಬೆಲೆ ಬಂದಿದ್ದು ಬಿಜೆಪಿ ಅಂದಿಲ್ಲ.ಈ ಜಿಲ್ಲೆಗೆ ಉಸ್ತುವಾರಿ ಸಚಿವರೇ ಇಲ್ಲ.ನಿಮ್ಮ ನೋಟಿಪಿಕೇ ಷನ್ ತೆಗೆದು ನೋಡಿ.ರಾಜ್ಯದ ಯಾವುದೇ ಜಿಲ್ಲೆಗೂ ಉಸ್ತುವಾರಿ ಸಚಿವರ ನೇಮಕ ಮಾಡಿಲ್ಲ.ನಿಮ್ಮ ಪಕ್ಕದಲ್ಲಿ ಕುಳಿತಿರುವವರು ಜಿಲ್ಲಾ ಉಸ್ತುವಾರಿ ಸಚಿವರು ಹೇಳ್ಕೋತಿ ದ್ದಾರಲ್ಲ ಅಂತಾ ಆಕ್ರೋಶವನ್ನು ವ್ಯಕ್ತಪಡಿಸಿದರು

ಒಂದು ಇನ್ವಿಟೇಷನ್ ಕಳಿಸಿ‌ ಕಾರ್ಯಕ್ರಮಕ್ಕೆ ಬನ್ನಿ ಅಂತಾ ಹೇಳ್ತಾರೆ.ಅಭಿವೃದ್ಧಿ ವಿಚಾರದ ಚರ್ಚೆಗೆ ಒಂದು ಸಭೆ ಫಿಕ್ಸ್ ಮಾಡಿ.RSS ಸಂಸ್ಕೃತಿ ಇದೇನಾ ಅಂತಾ ಕೇಳಿದರು ಸಂಸದ ಸುರೇಶ್ ಅವರು‌.ಸಂಸದರ ಹೇಳಿಕೆಗೆ ನೆರೆದಿದ್ದ ಸಾರ್ವಜನಿಕರ ಆಕ್ಷೇಪವನ್ನು ವ್ಯಕ್ತಪಡಿಸಿದರು.ಒಟ್ಟಾರೆ ಜನರಿಗೆ ಮಾದರಿಯಾಗಬೇಕಾಗಿದ್ದ ರಾಜಕೀಯ ನಾಯಕರು ಹೀಗೆ ಬಹಿರಂಗವಾಗಿ ವೇದಿಕೆಯ ಮೇಲೆ ನಡೆದುಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಇದಕ್ಕೆ ಅವರೇ ಉತ್ತರಿಸಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.