ದಾವಣಗೇರೆ –
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರಿಗೆ ಸ್ಥಳ ನಿಯೋಜನೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದೆ.ದಾವಣಗೇರಿ ಜಿಲ್ಲೆಯ ಜಗಳೂರು ತಾಲೂಕಿನ ಜಾಲಿನಗರ ಗ್ರಾಮದ ಸರ್ಕಾರಿ ಕಿರಿಯ ಶಾಲೆಗೆ ನಿಯೋಜನೆ ಮಾಡಿಕೊಡ ಲು ಆಂಜನೇಯ ನಾಯ್ಕ್ ಎಂಬುವರ ಬಳಿ 25 ಸಾವಿರ ಹಣಕ್ಕೆ ಜಗಳೂರು ಬಿಇಒ ಸಿ ಎಸ್ ವೆಂಕಟೇಶ್ ತಮ್ಮ ಕಚೇರಿಯ ಶಿಕ್ಣಣ ಸಂಯೋಜಕ ಮಂಜಪ್ಪ ಅವರಿಗೆ ಭೇಟಿಯಾಗಲು ಹೇಳಿದರು.
ಈ ಒಂದು ವಿಚಾರ ಕುರಿತು ಸಾಹೇಬ್ರು ಹೇಳಿದ್ದಾರೆ 25 ಸಾವಿರ ರೂಪಾಯಿ ಕೊಡಿ ಎಂದು ಶಿಕ್ಷಕರಿಗೆ ಹೇಳಿದ್ದಾರೆ. ಇದನ್ನು ಅರಿತ ಶಿಕ್ಷಕ ಆಂಜನೇಯ ಅವರು ಎಸಿಬಿ ಗೆ ದೂರನ್ನು ನೀಡಿದ್ದಾರೆ. ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ ಎಸಿಬಿ ಅಧಿಕಾರಿಗಳು ಲಂಚಕ್ಕೆ ಕೈ ಹಾಕಿದ್ದ ಬಿಇಒ ಮತ್ತು ಶಿಕ್ಷಕ ಸಂಯೋಜಕರ ಇಬ್ಬರನ್ನು ರೇಡ್ ಹ್ಯಾಂಡ್ ಹಾಗಿ ಟ್ರ್ಯಾಪ್ ಮಾಡಿದ್ದಾರೆ.
ಕೂಡಲೇ ಇಬ್ಬರನ್ನು ವಶಕ್ಕೆ ತಗೆದುಕೊಂಡ ಎಸಿಬಿ ಅಧಿಕಾರಿಗಳು ಎಲ್ಲಾ ಕಾರ್ಯಗಳನ್ನು ಮುಗಿಸಿ ನ್ಯಾಯಾಧೀಶರ ಮುಂದೆ ಹಾಜರು ಮಾಡಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಿಯೋಜನೆ ಮಾಡಿಕೊಡುತ್ತೇವೆ ಅಂತ ಲಂಚದ ಹಣಕ್ಕೆ ಬೇಡಿಕೆ ಇಟ್ಟು, 10,000/- ರೂ ಲಂಚದ ಹಣದೊಂದಿಗೆ ಇಬ್ಬರು ಇಲಾಖೆಯ ಅಧಿಕಾರಿಗಳ ನ್ನು ಜೈಲಿಗೆ ಶಿಕಕ ಕಳಿಸಿದ್ದಾರೆ.
ಹತ್ತು ಸಾವಿರ ರೂಪಾಯಿ ತಗೆದುಕೊಂಡ ನಂತರ ಉಳಿದ 15000 ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಅಲ್ಲದೇ ಬಾಕಿ ಹಣವನ್ನು ನೀಡುವಂತೆ ನಿರಂತರವಾ ಗಿ ಪೀಡಿಸುತ್ತಿದ್ದರಿಂದ ಬೇಸತ್ತ ಶಿಕ್ಷಕ ಎಸಿಬಿ ಯವರಿಗೆ ದೂರನ್ನು ನೀಡಿದ್ದರು.
ದೂರಿನ ಆಧಾರದ ಮೇಲೆ ದಾವಣಗೆರೆ ಎಸಿಬಿ ಪೊಲೀಸ್ ಠಾಣಾ ಪ್ರಕರಣ ಸಂಖ್ಯೆ 04/2021 ಕಲಂ:7 (ಎ) ಪಿ.ಸಿ ಆಕ್ಟ್-1988 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಛೇರಿಯ ಬಿಇಓ ಕೊಠಡಿಯಲ್ಲಿ ಶಿಕ್ಷಣ ಸಂಯೋಜಕರಾದ ಮಂಜಪ್ಪ ರವರ ಸಮಕ್ಷಮ ಬಿಇಓ ಸಿ.ಎಸ್. ವೆಂಕಟೇಶ್ ರವರು ಪಿರ್ಯಾದಿ ಯಿಂದ 10,000/- ರೂ ಲಂಚದ ಹಣ ಸ್ವೀಕರಿಸುತ್ತಿ ದ್ದ ವೇಳೆ ಮೇಲ್ಕಂಡ 02 ಜನ ಆಪಾದಿತ ಅಧಿಕಾರಿಗ ಳನ್ನು ಟ್ರ್ಯಾಪ್ ಮಾಡಿ, ದಸ್ತಗಿರಿ ಮಾಡಿರುತ್ತದೆ.ಈ ಕಾರ್ಯಾಚರಣೆಯನ್ನು ಜಯಪ್ರಕಾಶ್ ಮಾನ್ಯ ಪೊಲೀಸ್ ಅಧೀಕ್ಷಕರು, ಎಸಿಬಿ, ಪೂರ್ವ ವಲಯ, ದಾವಣಗೆರೆ ರವರ ಮಾರ್ಗದರ್ಶನದಂತೆ ಕೈಗೊಂಡಿ ದ್ದು, ಸುಧೀರ್.ಎಸ್, ಡಿಎಸ್ಪಿ ಪಿಐ ರವರುಗಳಾದ ಮಧುಸೂದನ್, ರವೀಂದ್ರ.ಎಂ.ಕುರುಬಗಟ್ಟಿ ಹಾಗೂ ಸಿಬ್ಬಂದಿಂಗಳು ಈ ಒಂದು ಕಾರ್ಯಚರಣೆ ಯಲ್ಲಿ ಪಾಲ್ಗೊಂಡಿದ್ದರು.