ಓಮಿಕ್ರಾನ್ ನಿಯಂತ್ರಣಕ್ಕೆ ಸಚಿವ ಸಂಪುಟದ ಸಭೆಯಲ್ಲಿ ಮಹತ್ವದ ನಿರ್ಣಯ – 50:50 ನಿಯಮ ಜಾರಿಗೆ ಶಾಲೆಗಳು ಬಂದ್…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕೆಲವೊಂದಿಷ್ಟು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.ಹೌದು ಸಿಎಂ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಮಹತ್ವದ ಸಭೆಯಲ್ಲಿ ನಿರ್ಣಯ ಗಳನ್ನು ತಗೆದುಕೊಳ್ಳಲಾಯಿತು

ರಾಜ್ಯದಲ್ಲಿ ಕೊರೋನಾ ತೀವ್ರ ಏರಿಕೆ, ಪಾಸಿಟಿವಿಟಿ ದರ ಹೆಚ್ಚಳ, ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಅಧಿಕಾರಿಗಳು,ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರು,ಸಚಿವರಾದ ಆರ್.ಅಶೋಕ್ ಡಾ.ಕೆ. ಸುಧಾಕರ್, ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ನಡೆಸಿದ ಸಭೆಯಲ್ಲಿ ಅನೇಕ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಹಲವು ಹೊಸ ನಿಯಮ ಜಾರಿಗೆ ತರಲು ನಿರ್ಣಯಗಳನ್ನು ತೆಗೆದುಕೊಳ್ಳುಲಾಯಿತು

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್ ವೈಜ್ಞಾನಿಕವಾಗಿ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಮತ್ತು ಹಲವು ರಾಜ್ಯಗಳಲ್ಲಿ ಕೈಗೊಂಡ ಕ್ರಮ ಗಳ ಬಗ್ಗೆ ಚರ್ಚಿಸಿ ತಜ್ಞರ ವರದಿ ಆಧರಿಸಿ ನಿಯಮ ಜಾರಿ ಗೊಳಿಸಲಾಗುವುದು.ಬೆಂಗಳೂರಲ್ಲಿ ಈ ಕ್ಷಣದವರೆಗೆ 3048 ಕೊರೋನಾ,ಒಮಿಕ್ರಾನ್ 148 ಒಮಿಕ್ರಾನ್ ಕೇಸ್ ಕಂಡು ಬಂದಿದ್ದು, ಕೊರೋನಾ 2 -3 ದಿನಗಳಲ್ಲಿ ದ್ವಿಗುಣ ಆಗುತ್ತಿದೆ ಎಂದರು.

ಬೆಂಗಳೂರಿಗೆ ಮತ್ತು ರಾಜ್ಯಕ್ಕೆ ಪ್ರತ್ಯೇಕ ರೂಲ್ಸ್ ತರಲಾ ಗಿದೆ.ಸಿಎಂ ಬಹಳ ಯೋಚನೆ ಮಾಡಿ ರೂಲ್ಸ್ ಜಾರಿಗೆ ಸೂಚಿಸಿದ್ದಾರೆ.ಮೆಟ್ರೋ ಸಿಟಿ ಬೆಂಗಳೂರಲ್ಲಿ ಶೇ. 85 ರಷ್ಟು ಕೇಸ್ ಗಳಿವೆ. ಪರಿಸ್ಥಿತಿ ಹೀಗಿರುವಾಗ ರಾಜ್ಯದಲ್ಲಿ ಪಾಸಿಟಿವಿ ದರ ಜಾಸ್ತಿಯಾಗಿದೆ ಎಂದರು.

ಸಭೆಯಲ್ಲಿ ತಗೆದುಕೊಂಡ ನಿರ್ಣಯಗಳು

ನಾಳೆ ರಾತ್ರಿ 10 ಗಂಟೆಗೆ ಹೊಸ ರೂಲ್ಸ್ ಜಾರಿಗೆ ಬರಲಿದೆ.

ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಗೆ ಬರಲಿದೆ.

ಆಹಾರ, ಹಾಲು, ಔಷಧ, ಸೇರಿ ಅಗತ್ಯವಸ್ತು ಅವಕಾಶ ವಿದೆ.

ಚಿತ್ರಮಂದಿರ, ಬಾರ್, ಸರ್ಕಾರಿ ಕಚೇರಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನ್ವಯವಾಗಲಿದೆ.

ಎರಡು ವಾರ ಶಾಲೆಗಳನ್ನು ಬಂದ್ ಮಾಡಲಾಗುವುದು. ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿವರೆಗೆ ಹೊರತುಪಡಿಸಿ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ

ಬೆಂಗಳೂರಿನಲ್ಲಿ ಒಂದರಿಂದ 9ನೇ ತರಗತಿವರೆಗೆ ಶಾಲೆಗ ಳನ್ನು ಬಂದ್ ಮಾಡಲಾಗುತ್ತದೆ.

ಮದುವೆ ಹೊರಾಂಗಣದಲ್ಲಿ 200, ಒಳಾಂಗಣದಲ್ಲಿ 100 ಜನ ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ಭಾಗವಹಿಸಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.