ಶಿಕ್ಷಕಿ ಸುವರ್ಣ ಇನ್ನೂ ನೆನಪು ಮಾತ್ರ – ಅಕಾಲಿಕವಾಗಿ ನಿಧನ ರಾದ ಯುವ ಟೀಚರ್ ಗೆ ರಾಜ್ಯದ ಶಿಕ್ಷಕ ಬಂಧುಗಳಿಂದಭಾವಪೂರ್ಣ ನಮನ ಸಂತಾಪ…..

Suddi Sante Desk

ರಾಯಚೂರು –

ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಶಿಕ್ಷಕಿಯೊಬ್ಬರು ನಿಧನರಾಗಿದ್ದಾರೆ ಹೌದು ಎಂದಿನಂತೆ ಶಾಲೆಗೆ ಹೊರಟಿದ್ದ ಶಿಕ್ಷಕಿಯೊಬ್ಬರು ರಕ್ತದ ಒತ್ತಡ ಕಡಿಮೆಯಾಗಿ ಕುಸಿದು ಬಿದ್ದು ನಿಧನರಾಗಿ ದ್ದಾರೆ.ಮನೆಯಲ್ಲಿಯೇ ಕುಸಿದ ಬಿದ್ದ ಶಿಕ್ಷಕಿ ಸುವರ್ಣ ಇವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗ ಲಾಯಿತು ಆದರು ಕೂಡಾ ಚಿಕಿತ್ಸೆ ನೀಡುವ ಮುನ್ನವೇ ಬಾರದ ಲೋಕಕ್ಕೆ ತೆರಳಿದರು.ಇನ್ನೂ ಸುವರ್ಣ ಕನ್ನಡ ಶಿಕ್ಷಕಿಯಾಗಿದ್ದು ಇಂದು ಬೆಳಿಗ್ಗೆ ಅಕಾಲಿಕವಾಗಿ ನಿಧನ ರಾಗಿದ್ದಾರೆ.ಸಧ್ಯ ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಹೂನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ.

ಒಳ್ಳೆಯ ಆದರ್ಶ ಉತ್ಸಾಹಿ ಇಲಾಖೆ ಯಲ್ಲಿ ಶಾಲೆಯಲ್ಲಿ ತುಂಬಾ ಉತ್ಸಾಹಿ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿದ್ದು ಅಕಾಲಿಕ ನಿಧನದಿಂದಾಗಿ ಲಿಂಗಸೂರು ತಾಲೂಕಿನ ಶಿಕ್ಷಕರ ಬಳಗ ಹಾಗೂ ರಾಯಚೂರು ಜಿಲ್ಲೆಗೆ ತುಂಬಲಾರದ ದೊಡ್ಡ ಆಘಾತದೊಂದಿಗೆ ನಷ್ಟವಾಗಿದ್ದು ಮೃತರಾದ ಇವರ ನಿಧನಕ್ಕೆ ರಾಜ್ಯ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಪವಾಡೆಪ್ಪ ತೀವ್ರವಾದ ಸಂತಾಪವನ್ನು ಸೂಚಿಸಿದ್ದಾರೆ. ಇವರೊಂದಿಗೆ ಶಿಕ್ಷಕ ಬಂಧುಗಳಾದ ನಾಗಪ್ಪ,ಮಲ್ಲಿಕಾರ್ಜುನ,ಹನಮಂತಪ್ಪ ಮೇಟಿ, ಶರಣಪ್ಪ ನೀಲಪ್ಪ,ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ತೀವ್ರವಾದ ಸಂತಾಪವನ್ನು ಸೂಚಿಸಿ ನಮನ ವನ್ನು ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.