ರಾಜ್ಯದಲ್ಲಿ ವಿದ್ಯಾಗಮ ಕಲಿಕೆ ಜಾರಿ ಶಿಕ್ಷಣ ಸಚಿವ – ಮಕ್ಕಳ ನಿರಂತರ ಕಲಿಕೆಗೆ ಅವಕಾಶ ಹಿನ್ನಲೆಯಲ್ಲಿ ಜಾರಿಗೆ ಎಂದರು ಶಿಕ್ಷಣ ಸಚಿವ ಬಿ ಸಿ ನಾಗೇಶ್…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ನಿರಂತರ ಕಲಿಕೆಗೆ ಅವಕಾಶ ಮಾಡಿಕೊಡಲು ಶಿಕ್ಷಣ ಇಲಾಖೆ ವಿದ್ಯಾಗಮ ಮರು ಜಾರಿ ಮಾಡುತ್ತಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿ ದರು.ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು

ಬೆಂಗಳೂರು ಹೊರತು ಪಡಿಸಿ ಹೊರತು ಪಡಿಸಿ ರಾಜ್ಯದಲ್ಲಿ ಶಾಲಾ ಕಾಲೇಜುಗಳು ತೆರೆಯಲು ಅವಕಾಶ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾ ದಲ್ಲಿ ಮಕ್ಕಳ ನಿರಂತರ ಕಲಿಕೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಆನ್‌ಲೈನ್ ತರಗತಿಗಳ ಜೊತೆಗೆ ವಿದ್ಯಾಗಮ ಜಾರಿ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.ಈ ಸಂಬಂ ಧ 1 ರಿಂದ 09 ನೇ ತರಗತಿ ವರೆಗೆ ವಿದ್ಯಾಗಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹಂತ ಹಂತವಾಗಿ ವಿದ್ಯಾರ್ಥಿಗಳನ್ನು ತಲಾ 25 ವಿದ್ಯಾರ್ಥಿಗಳಂತೆ ತಂಡ ಮಾಡಿಕೊಳ್ಳಬೇಕು. ಪ್ರತಿ 25 ವಿದ್ಯಾರ್ಥಿಗಳ ತಂಡಕ್ಕೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಬೇಕು. ಅವರ ಉಸ್ತುವಾರಿಯಲ್ಲಿ ಶಾಲೆಯಲ್ಲಿ ವಿದ್ಯಾಗಮ ಅನುಷ್ಠಾನ ಮಾಡಲು ಅವಕಾಶ ಕಲ್ಪಿಸಲಾ ಗಿದೆ.ಭವಿಷ್ಯದಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕು ಜಾಸ್ತಿ ಯಾದಲ್ಲಿ ಆನ್‌ಲೈನ್ ಹಾಗೂ ವಿದ್ಯಾಗಮ ಎರಡನ್ನೂ ಏಕಕಾಲದಲ್ಲಿ ಅನುಷ್ಠಾನ ಮಾಡಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಮೊಬೈಲ್, ಕಂಪ್ಯೂಟರ್ ಅಂತರ್ಜಾಲ ಸಂಪರ್ಕ ಸೌಲಭ್ಯ ವಿಲ್ಲದ ಮಕ್ಕಳು ಶಾಲೆಗೆ ತೆರಳಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ.ನಾಲ್ಕು ತರಗತಿಗೆ ಅವಕಾಶ ಒಂದು ಶಾಲೆಯಲ್ಲಿ ಪ್ರತಿ ದಿನ ಆರರಿಂದ ಎಂಟು ತರಗತಿಗಳು ನಡೆಯುತ್ತವೆ. ಆದರೆ ವಿದ್ಯಾಗಮ ಅಡಿ ನಾಲ್ಕು ತರಗತಿ ಗಳಿಗೆ ಸೀಮಿತಗೊಳಿಸಲಾಗಿದೆ.ಇದರ ಜೊತೆಗೆ ಹಂತ ಗಂತದಲ್ಲಿನ ವ್ಯವಸ್ಥೆ ಯಲ್ಲಿ ಕಡಿಮೆ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಬೋಧನೆ ಮಾಡಲು ವಿದ್ಯಾಗಮ ಅಡಿ ಸೂಚನೆ ನೀಡಲಾಗಿದೆ.ಮೊಬೈಲ್,ಕಂಪ್ಯೂಟರ್ ಸಾಧನ ಇಲ್ಲದ ಮಕ್ಕಳು ದೇವಸ್ಥಾನ,ವಠಾರ,ಸಮುದಾಯ ಭವನ, ಶಾಲೆ ಆವರಣದಲ್ಲಿ ಕಾಲ್ಪನಿಕ ತರಗತಿ ಕೋಣೆಯಲ್ಲಿ ವಿದ್ಯಾಗಮ ನಡೆಸಲು ಸೂಚಿಸಲಾಗಿದೆ.ಸಲಹಾತ್ಮಕ ವೇಳಾ ಪಟ್ಟಿ ಬಿಡುಗಡೆ1 ರಿಂದ 5 ನೇ ತರಗತಿ ವರೆಗಿನ ಕಿರಿಯ ಪ್ರಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮತ್ತು ಪರ್ಯಾಯ ಶೈಕ್ಷಣಿಕ ಚಟುವಟಿಕೆ ನಿರ್ವಹಣೆಗೆ ಸಲಹಾತ್ಮಕ ವೇಳಾ ಪಟ್ಟಿಯನ್ನು ಸಹ ಶಿಕ್ಷಣ ಇಲಾಖೆ ನೀಡಿದೆ. 1 ರಿಂದ 3 ನೇ ತರಗತಿ ವರೆಗೆ ವಾರಕ್ಕೆ ಎರಡು ದಿನ, 4 ರಿಂದ 5 ನೇ ತರಗತಿ ವರೆಗೆ ವಾರಕ್ಕೆ ಮೂರು ದಿನ ಪಾಳಿ ಪದ್ಧತಿಯಲ್ಲಿ ತಲಾ 45 ನಿಮಿಷದಂತೆ ಮೂರು ಅವಧಿಗಳಂತೆ 2. 30 ನಿಮಿಷ ಕಾಲಾವಕಾಶ ನಿಗದಿ ಮಾಡಲಾಗಿದೆ ಎಂದರು

ಹೀಗೆ 1 ರಿಂದ 9 ನೇ ತರಗತಿ ವರೆಗೆ ವರೆಗೆ ಸಲಹತ್ಮಕ ವೇಳಾ ಪಟ್ಟಿಯನ್ನು ಸಹ ಶಿಕ್ಷಣ ಇಲಾಖೆ ನೀಡಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ ಈ ಹಿಂದೆ ಕೊರೊನಾ ಸೋಂಕಿನಿಂದ ಮಕ್ಕಳ ಕಲಿಕೆ ಮೇಲೆ ಭಾರೀ ನಕಾರಾತ್ಮಕ ಪರಿಣಾಮ ಬೀರಿದೆ. ಹೀಗಾಗಿ ಮಕ್ಕಳ ಕಲಿಕೆ ಮೇಲೆ ಬೀರುವ ಪರಿಣಾಮ ತಪ್ಪಿಸಿ ನಿರಂತರ ಕಲಿಕೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವಿದ್ಯಾಗಮ ಪರಿಚಯಿಸಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಮಕ್ಕಳ ಕಲಿಕೆಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ವಿದ್ಯಾಗಮ ಮರು ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.