ಧಾರವಾಡ –
ಬಿಜೆಪಿ ಯುವ ಮೋರ್ಚಾದ ಧಾರವಾಡ 71 ನಗರ ಮಂಡಲದ ಕಾರ್ಯಕಾರಿಣಿ ಸಭೆ ಧಾರವಾಡದಲ್ಲಿ ನಡೆಯಿತು. ಶಾಸಕ ಅಮೃತ ದೇಸಾಯಿ ಈ ಒಂದು ಕಾರ್ಯಕಾರಣಿ ಸಭೆಗೆ ಚಾಲನೆ ನೀಡಿದರು. ಇದೇ ವೇಳೆ ಮಂಡಲದ ಯುವ ಮೋರ್ಚಾ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ
ಪ್ರತಿ ವಾರ್ಡಿನಿಂದ ಯುವ ಮೋರ್ಚಾ ತಂಡಗಳ ರಚನೆ ಮಾಡಿ ಯುವ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಶಕ್ತಿ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಶಾಸಕರಾದ ಅಮೃತ ದೇಸಾಯಿ ಉದ್ಘಾಟನೆ ಮಾಡಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯರು ಮತ್ತು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಧ್ಯಕ್ಷರಾದ ಈರೇಶ ಅಂಚಟಗೇರಿ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಬಾಳಿಕಾಯಿ, ಉಪಾಧ್ಯಕ್ಷರಾದ ಪ್ರಕಾಶ್ ಶೃಂಗೇರಿ, ಜಿಲ್ಲಾ ಉಪಾಧ್ಯಕ್ಷರಾದ ಈರಣ್ಣ ಹಪ್ಪಳಿ ಕಾರ್ಯದ ರ್ಶಿಗಳಾದ ಸಿದ್ದು ಕಲ್ಯಾಣಶೆಟ್ಟಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಕಿರಣ ಉಪ್ಪಾರ, ಪ್ರಧಾನ ಕಾರ್ಯದರ್ಶಿಗಳು ಶಿವಯ್ಯ ಹಿರೇಮಠ,
ಸಂಗಮ ಹಂಜಿ,ಮಂಡಲ ಅಧ್ಯಕ್ಷರಾದ ಸುನಿಲ್ ಮೋರೆ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ಕೋಟ್ಯಾನ್, ಹರೀಶ್ ಬಿಜಾಪುರ,ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಮುತ್ತು ಬನ್ನೂರು ಮತ್ತು ವಿನಾಯಕ ಗೊಂದಳಿ,ಮಂಜು ಯರಗಟ್ಟಿ,ಸೂರಜ್ ಅಳಗವಾಡಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು