BEO ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಪತ್ರ ಬರೆದಿದ್ದು ಸರಿನಾ ಆತ್ಮಾವಲೋಕನ ಮಾಡಿಕೊಳ್ಳಿ ನಾಡಿನ ಶಿಕ್ಷಕರ ಪ್ರಶ್ನೆ…..

Suddi Sante Desk

ಕೊಪ್ಪಳ –

ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರೇ…..

?ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ವಿರುದ್ಧ ಅವಧಿ ಮುಗಿದ CRP/BRP ಗಳು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಕೊಡುತ್ತಿರುವದಕ್ಕೆ ತಾಲ್ಲೂಕಿನ ಬಿ ಇ ಓ ರವರಿಗೆ ಆದೇಶ ಮಾಡಿ ಅಂತ ಪತ್ರ ಬರೆಯುತ್ತಿರುವದು ಎಷ್ಟು ಸರಿ ಎಂದು ಆತ್ಮವಲೋಕನ ಮಾಡಿಕೊಳ್ಳಿ?ಅಷ್ಟಕ್ಕೂ ಅವರೂ ಕೂಡ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ₹200 ರೂಪಾಯಿ ವಾರ್ಷಿಕ ಶುಲ್ಕ ಕೊಡ್ತಾರೆ.ನಿಮಗೆ ಕೇಳುವ ಹಕ್ಕು ಅವರಿಗೆ ಇಲ್ಲ ಎಂದಾದರೆ ನೀವು ಆ ತಾಲ್ಲೂಕಿನ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಿಗೆ ₹200 ಅವರ ವೇತನದಲ್ಲಿ ಕಡಿತ ಮಾಡದಿರುವಂತೆ ಪತ್ರ ಬರೆಯಿರಿ. ಅವರ ದುಡ್ಡು ಮಾತ್ರ ಬೇಕು ಅವರ ಸಮಸ್ಯೆಗಳು ಅಂದ್ರೆ ಬೇಡವಾ?. ಇಡು ಯಾವ ನ್ಯಾಯ ಸ್ವಾಮಿ?

?ನಮ್ಮ ಸಂಘದ ಪರವಾಗಿ CRP/BRP ಶಿಕ್ಷಕರು ಮಾತನಾಡಲು ನಿಮ್ಮಿಂದ ಶಿಕ್ಷಕರಿಗೆ ಆಗಿರುವ ಒಳ್ಳೆಯ ಕೆಲಸಗಳಾದರೂ ಯಾವವು?. ಶಿಕ್ಷಕರ ಹಾಗೂ ಇಲಾಖೆಯ ಮಧ್ಯೆ ಮಧ್ಯವರ್ತಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ CRP/BRP ಗಳಿಗೆ ಸರಿಯಾದ ಸ್ಥಳ ಅವಕಾಶ ಮಾಡಿಕೊಡದೆ ದೂರದ ಸ್ಥಳಗಳಿಗೆ ಹೋಗು ವಂತೆ ಮಾಡುತ್ತಿರುವ ನಿಮ್ಮ ಸಂಘದ ವಿರುದ್ಧ ಬರೆಯದೆ ನಿಮ್ಮ ಪರವಾಗಿ ಬರೆಯಬೇಕಾ?

?ಈಗಾಗಲೇ C&R ನಿಯಮ ಜಾರಿಯಿಂದಾಗಿ 6-8 ನೇ ತರಗತಿಗಳಿಗೆ ಬೋದನೆ ಮಾಡಲು ಪರೀಕ್ಷೆ ಬರೆಯುವದಕ್ಕೆ ಪರೋಕ್ಷವಾಗಿ ಬೆಂಬಲ ನೀಡಿ ನಮ್ಮ ಶಿಕ್ಷಕರನ್ನು ಮಾನಸಿ ಕವಾಗಿ ಕುಗ್ಗುವಂತೆ ಮಾಡುತ್ತಿರುವ ನಮ್ಮ ಸಂಘಕ್ಕೆ ಹೋಗಳಬೇಕಾ

?ನಮ್ಮ ಸಂಘದಿಂದ ಶಿಕ್ಷಕರಿಗೆ ಆಗಿರುವಂಥ ಒಂದಾ ದರೂ ಒಳ್ಳೆಯ ಕೆಲಸಾದರೂ ಹೇಳಿ ನೋಡೋಣ. ನಿಜವಾಗಲೂ ನಿಮಗೆ ಮಾನವೀಯತೆ ಇದ್ದರೆ ಮುಂದೆ ಫೆಬ್ರವರಿ 04 ರಂದು ನಡೆಯಲಿರುವ ಅವಧಿ ಮುಗಿದ CRP/BRP ಶಿಕ್ಷಕರ ಕೌನ್ಸಲಿಂಗ ನಲ್ಲಿ ನ್ಯಾಯಯುತವಾಗಿ ಅವರು ಬಯಸುವ ತಾಲ್ಲೂಕಿನಲ್ಲಿಯೇ ಎಲ್ಲಾ ವಿಷಯ ಗಳಿಗೂ ಸ್ಥಳ ನಿಯುಕ್ತಿಗೊಳಿಸುವಂತೆ ಮಾನ್ಯ ಆಯುಕ್ತ ರಿಂದ ಮೊದಲು ಆದೇಶ ಮಾಡಿಸಿ ಅವರನ್ನು ನೆಮ್ಮದಿ ಯಿಂದ ಕರ್ತವ್ಯ ನಿರ್ವಹಿಸುವಂತೆ ಮಾಡಿ.ಅವಾಗ ಎಲ್ಲರೂ ನಿಮ್ಮ ಸಂಘವನ್ನು ಹೋಗಳುತ್ತಾರೆ.

?ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಕರ ಸಮಸ್ಯೆಗಳನ್ನು ಸೃಷ್ಟಿವಂತಹ ಸಂಘ ಆಗಿ ಮಾರ್ಪಡು ವಾಗುವತ್ತ ಹೆಜ್ಜೆ ಇಡುತ್ತಿದೆ ಅಂದರೆ ತಪ್ಪಾಗಲಾರದು.

?ನಿಮ್ಮ ಕಡೆಯಿಂದ PST ಶಿಕ್ಷಕರಿಗೆ ಪರೀಕ್ಷೆ ಇಡದೆ 6-8ಕ್ಕೆ ವಿಲೀನಗೊಳಿಸಲು ಆಗದೆ ಇದ್ದರೆ ಮತ್ತು ಅವಧಿ ಮುಗಿದ CRP/BRP ಗಳಿಗೆ ಅವರವರ ತಾಲ್ಲೂಕಿನಲ್ಲಿಯೇ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡದೆ ಇದ್ದರೆ ನೀವು ಆ ಹುದ್ದೆಯಲ್ಲಿ ಇರೋ ನೈತಿಕತೆ ಕಳೆದು ಕೊಳ್ಳುತ್ತಿರಿ ಅನ್ನೋದು ಮರೆಯದಿರಿ.ನಿಮ್ಮ ದುರ್ಬಲ ನಾಯಕತ್ವದಿಂದ ಇನ್ನಷ್ಟು ಶಿಕ್ಷರ ಸಮಸ್ಯೆಗಳು ಹೆಚ್ಚು ಆಗುತ್ತಿವೆ ಹೊರತು ಕಡಿಮೆ ಆಗುತ್ತಿಲ್ಲ.

ಆನಂದ ಭೀ ಕೆಂಭಾವಿ ಸರಕಾರಿ KBHPS ಹಿರೇಮಸಳಿ ನಿರ್ದೇಶಕರು KSPSTA ಇಂಡಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.