ರೋಗಿಯ ಪ್ರಾಣ ಉಳಿಸಿದ ಸಂಚಾರಿ ಪೊಲೀಸ್ ಪೇದೆ ಪೊಲೀಸ್ ಪೇದೆ ಕಾಸಪ್ಪ ಕಲ್ಲೂರ ಮಾಡಿದ ಕೆಲಸ ನೋಡಿದ್ರೆ ಹೆಮ್ಮೆ ಪಡತೀರಾ…..

Suddi Sante Desk

ಬೆಂಗಳೂರು –

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಯ ಪ್ರಾಣ ಉಳಿಸಲು ಬೆಂಗಳೂರಿನಲ್ಲಿ ಸ್ವತಃ ತಾವೇ ಸಂಚಾರಿ ಪೊಲೀಸ್ ಪೇದೆಯೊಬ್ಬರು ಮೆಕ್ಯಾನಿಕ್ ಆಗಿದ್ದಾರೆ‌ ಹೌದು ಸರಿಯಾದ ಸಮಯಕ್ಕೆ ಈ ಪೊಲೀಸಪ್ಪ ಬಾರದಿದ್ದಲ್ಲಿ ಅನಾಹುತ ಸಂಭವಿಸುತ್ತಿತ್ತು.ಅಷ್ಟರಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ಸಿಬ್ಬಂದಿ ಕಾಸಪ್ಪ ಕಲ್ಲೂರು ಸಮಯ ಪ್ರಜ್ಞೆ ಮೆರೆದಿದ್ದು ಇವರ ಕಾರ್ಯಕ್ಕೆ ಮೆಚ್ಚುಗೆಯ ಮಹಾ ಪೂರವೇ ಹರಿದು ಬರ್ತಿದೆ.ಅಷ್ಟಕ್ಕೂ ಪೊಲೀಸ್ ಸಿಬ್ಬಂದಿ ಮಾಡಿದ ಮತಹ್ವದ ಕಾರ್ಯ ಎಂತಹದ್ದು ಗೊತ್ತಾ ಇದು ಗ್ಲೋಬಲ್ ಹಾಸ್ಪಿಟಲ್ನಿಂದ ಬೇರೆ ಖಾಸಗಿ ಆಸ್ಪತ್ರೆಗೆ ರೋಗಿಯೊಬ್ಬರನ್ನು ಆಂಬುಲೆನ್ಸ್ ನಲ್ಲಿ ಕುಟುಂಬಸ್ಥರು ಶಿಫ್ಟ್ ಮಾಡುತ್ತಿದ್ದರು.

ರೋಗಿಯನ್ನು ಕರೆದೊಯ್ಯುವ ಮಾರ್ಗಮಧ್ಯೆ ವಿಧಾನ ಸೌಧದ ಸಿಐಡಿ ಕಚೇರಿ ಬಳಿ ಆಂಬುಲೆನ್ಸ್ ಟಯರ್ ಪಂಚರ್ ಆಗಿಬಿಡ್ತು. ಕಂಗಾಲಾದ ರೋಗಿಯ ಪತ್ನಿ ಹಾಗೂ ಮಗಳು ಕಣ್ಣೀರಿಡುತ್ತಾ 10ಕ್ಕೂ ಹೆಚ್ಚು ಆಂಬುಲೆನ್ಸ್ಗೆ ಕಾಲ್ ಮಾಡಿದ್ದರು. ಪೊಲೀಸ್ ಸಿಬ್ಬಂದಿ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಯಾವುದೇ ಆಂಬುಲೆನ್ಸ್ ಸಿಗಲಿಲ್ಲ. ರೋಗಿಯ ಆಕ್ಸಿಜನ್ ಲೆವೆಲ್ ಕೂಡ ಕಡಿಮೆ ಆಗ್ತಿತ್ತು. ಸ್ಥಳದಲ್ಲೇ ಇದ್ದ ಕರ್ತವ್ಯನಿರತ ಸಂಚಾರಿ ಪೊಲೀಸ್ ಸಿಬ್ಬಂದಿ ಕಾಸಪ್ಪ ಕಲ್ಲೂರು ಅವರಿಗೆ ಆಂಬುಲೆನ್ಸ್ ಒಳಗಿದ್ದ ರೋಗಿ ಪರಸ್ಥಿತಿ ಅರಿವಾಯ್ತು.ಬೇರೆ ಆಂಬುಲೆನ್ಸ್ ಬರೋದು ತಡವಾದ್ರೆ ರೋಗಿಯ ಪ್ರಾಣವೇ ಹೋಗಬ ಹುದು.ಇನ್ನು ತಡ ಮಾಡೋದು ಬೇಡ ಎಂದು ತಾನೇ ಮೆಕ್ಯಾನಿಕ್ ಆಗಿ ಆಂಬುಲೆನ್ಸ್ನ ಟಯರ್ ಬದಲಿಸಿ ಆಂಬುಲೆನ್ಸ್ ಹೊರಡಲು ಅನುವು ಮಾಡಿಕೊಟ್ಟರು. ಟಯರ್ ಬದಲಿಸಿ ಇನ್ನೇನು ಆಂಬುಲೆನ್ಸ್ ಹೊರಡಬೇಕು ಅನ್ನುವಾಗ ಮತ್ತೊಂದು ಆಂಬುಲೆನ್ಸ್ ಬಂದಿದೆ.45 ನಿಮಿಷವಾದರೂ ಬೇರೆ ಆಂಬುಲೆನ್ಸ್ ಸಿಕ್ಕಿರಲಿಲ್ಲ. ರೋಗಿಯ ಪ್ರಾಣ ಉಳಿಸಲು ಸಮಯ ಪ್ರಜ್ಞೆ ಜತೆಗೆ ಮಾನವೀಯತೆ ಮರೆದ ಕಾಸಪ್ಪ‌ ಕಲ್ಲೂರು ಅವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.