ಧಾರವಾಡ –
ಧಾರವಾಡದ ಜರ್ಮನ್ ಆಸ್ಪತ್ರೆಯ ಸರ್ಕಲ್ ನಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಆಸ್ಪತ್ರೆಯ ಸರ್ಕಲ್ ಹತ್ತಿರ ಯಾವುದೋ ಖಾಯಿಲೆ ಯಿಂದ ವ್ಯಕ್ತಿಯೊಬ್ಬನು ಬಳಲುತ್ತಿದ್ದನು.ಈ ಒಂದು ಸುದ್ದಿ ತಿಳಿದ ಧಾರವಾಡ ಉಪನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ತಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟರು.

ಇನ್ನೂ ಮೃತರಾದ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಲಬ್ಯವಾಗಿ ರುವುದಿಲ್ಲ ಹೀಗಾಗಿ ಈ ಒಂದು ವ್ಯಕ್ತಿಯ ಕುರಿತು ಯಾರಾದರೂ ಮಾಹಿತಿ ಇದ್ದರೆ ಧಾರವಾಡದ ಉಪನಗರ ಪೊಲೀಸರಿಗೆ ಮಾಹಿತಿ ನೀಡುವಂತೆ ಇನ್ಸ್ಪೆಕ್ಟರ್ ಪ್ರಮೋದ್ ಯಲಿಗಾರ ಹೇಳಿದ್ದಾರೆ. ಇನ್ನೂ ವ್ಯಕ್ತಿಗೆ ಚಿಕಿತ್ಸೆ ನೀಡಿಸಲು ಸ್ಥಳ ಕ್ಕೆ ಆಗಮಿಸಿ ಪ್ರಯತ್ನ ಮಾಡಿದ ಬಸವರಾಜ ಮೇಗುಂಡಿ, ಹಂಚಿನಾಳ ಸೇರಿದಂತೆ ಉಪನಗರ ಪೊಲೀಸರ ಪ್ರಯತ್ನ ಸಾರ್ಥಕವಾಗಲಿಲ್ಲ