ಬೆಂಗಳೂರು –
ರಾಜ್ಯದಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದೆ.ಈಗಾಗಲೇ ರಾಜ್ಯದ ಎಂಟು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಹೀಗಿದ್ದರೂ ಕೂಡಾ ಪರಿಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಲಾಕ್ ಡೌನ್ ಘೋಷಣೆ ಕುರಿತು ಚರ್ಚಿಸಲು ಈ ತಿಂಗಳ 18 ರಂದು ಸರ್ವಪಕ್ಷ ಸಭೆ ಕರೆಯುವುದಾಗಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖಗವಸುಗಳನ್ನು ಧರಿಸಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವ ಮೂಲ ಕ ಎರಡನೇ ಹಂತದಲ್ಲಿ ಸೋಂಕು ಉಲ್ಬಣವನ್ನು ನಿಯಂತ್ರಿಸುವಲ್ಲಿ ಜನರು ಸರ್ಕಾರದೊಂದಿಗೆ ಸಹಕ ರಿಸಬೇಕು.ಇಲ್ಲವಾದಲ್ಲಿ ಕಠಿಣ ನಿರ್ಧಾರ ತೆಗೆದುಕೊ ಳ್ಳಬೇಕಾಗುತ್ತದೆ ಎಂದು ಸಿಎಂ ಹೇಳಿದರು

ಸದ್ಯ ಲಾಕ್ಡೌನ್ ಹೇರುವ ಪ್ರಸ್ತಾಪವಿಲ್ಲ. ಆದರೆ, ಮೇ 2 ರ ವೇಳೆಗೆ ಕೋವಿಡ್ ಎರಡನೇ ಅಲೆಯ ಪಾಸಿಟೀವ್ ಪ್ರಕರಣಗಳು ಉತ್ತುಂಗಕ್ಕೇರಬಹುದು ಎಂದು ತಜ್ಞರ ಸಮಿತಿ ವರದಿ ನೀಡಿದೆ ಹೀಗಾಗಿ ಎಲ್ಲಾ ವಿಚಾರಗಳ ಕುರಿತು ಚರ್ಚಿಸಲು ಈ ಒಂದು ಸರ್ವ ಪಕ್ಷಗಳ ಸಭೆಯನ್ನು ಕರೆದಿರುವುದಾಗಿ ಹೇಳಿ ದರು