ಶಿಕ್ಷಕರ ನೇಮಕಾತಿಗೆ ಕಠಿಣ ನಿಯಮಗಳ ಸಡಿಲಿಕೆ – ಅಂಕಗಳ ಇಳಿಕೆ ಮಾಡಿ ಅನುಕೂಲ ಮಾಡಿ ಕೊಟ್ಟ ಪ್ರಾಧಿಕಾರ…..

Suddi Sante Desk

ಬೆಂಗಳೂರು –

ಶಿಕ್ಷಕರ ನೇಮಕಾತಿಗೆ ಕಠಿಣ ನಿಯಮಗಳನ್ನು ಸಡಿಲ ಮಾಡಲಾಗಿದ್ದು, ಪತ್ರಿಕೆ-2 ಮತ್ತು ಪತ್ರಿಕೆ -3ರ ಅಂಕ ಇಳಿಕೆ ಮಾಡಲಾಗಿದೆ.ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ನಿಯಮಗಳನ್ನು ಸಡಿಲಿಕೆ ಮಾಡಲಾಗಿದ್ದು ಲಕ್ಷಾಂತರ ಮಂದಿ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.ಸ್ಪರ್ಧಾತ್ಮಕ ಪರೀಕ್ಷೆ ಪತ್ರಿಕೆ 2 ವಿಷಯ ಜ್ಞಾನ ಕನಿಷ್ಠ ಅರ್ಹತೆ ಮಿತಿಯನ್ನು ಶೇಕಡ 50 ರಿಂದ ಶೇ. 45 ಕ್ಕೆ ಇಳಿಕೆ ಮಾಡಲಾಗಿದೆ.

ಪತ್ರಿಕೆ 3 ಭಾಷಾ ಸಾಮರ್ಥ್ಯ ಕನಿಷ್ಠ ಅರ್ಹತೆ ಮಿತಿಯನ್ನು ಕನಿಷ್ಠ ಶೇಕಡ 60 ರಿಂದ ಶೇಕಡ 50 ಕ್ಕೆ ಇಳಿಕೆ ಮಾಡಲಾ ಗಿದೆ.ಇದಲ್ಲದೆ ಎರಡು ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಅನೇಕ ವರ್ಷಗಳಿಂದ ಶಿಕ್ಷಣ ಇಲಾಖೆ ಯಲ್ಲಿ ನೇಮಕಾತಿ ನಡೆಯದ ಕಾರಣ 2 ವರ್ಷ ವಯೋ ಮಿತಿ ಸಡಿಲಿಕೆ ಮಾಡಲಾಗಿದೆ.ಪ್ರಶ್ನೆಗಳ ಸಂಖ್ಯೆಯನ್ನು ಕಡಿತಗೊಳಿಸಿ ಉತ್ತರಗಳನ್ನು ವಾಕ್ಯಗಳ ಬದಲು ಪದಗ ಳಿಗೆ ಸೀಮಿತಗೊಳಿಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.ಪದವೀಧರ ಶಾಲಾ ಶಿಕ್ಷಕರ ನೇಮಕಾ ತಿಗೆ ಸಿಇಟಿ ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕೇತರ ಪ್ರದೇಶ ಹುದ್ದೆಗಳಿಗೆ ಪ್ರತ್ಯೇಕ ಎರಡು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಇದನ್ನು ಸಡಿಲಿಕೆ ಮಾಡಿ ಎರಡು ಹುದ್ದೆಗಳಿಗೆ ಒಂದೇ ಪರೀಕ್ಷೆ ನಡೆಸಲು ಮುಂದಾಗಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಎರಡು ಪರೀಕ್ಷೆ ಬರೆಯುವ ಬದಲಿಗೆ ಒಂದೇ ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ ಎನ್ನಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.