ರಾಜ್ಯಸರ್ಕಾರಿ ನೌಕರರ ಬೇಡಿಕೆಗಳಿಗೆ ಯಾವಾಗಲೂ ಸ್ಪಂದಿಸುತ್ತೇನೆ ಮುಖ್ಯಮಂತ್ರಿ ಹೇಳಿಕೆ – ನಿವೃತ್ತಿ ನೌಕರರಿಗೂ ಪಿಂಚಿಣಿ ಹೆಚ್ಚಿಸುವ ಮಾತನ್ನು ಹೇಳಿದ ನಾಡದೋರೆ…..

Suddi Sante Desk

ಬೆಂಗಳೂರು –

ರಾಜ್ಯದ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹೊಸ ವೇತನ ಆಯೋಗ ರಚನೆ ಮಾಡುವ ಇಂಗಿತವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಹೇಳಿದ್ದು ಇದರೊಂದಿಗೆ ನೌಕರರ ಯಾವುದೇ ಬೇಡಿಕೆಗ ಳಿಗೆ ಯಾವಾಗಲೂ ಸ್ಪಂದಿಸುತ್ತೇನೆ ಎಂದಿದ್ದಾರೆ. ಬೆಂಗಳೂ ರಿನಲ್ಲಿ ಮಾತನಾಡಿದ ಅವರು ವಿಧಾನ ಸರಕಾರಿ ನೌಕರರ ಸಂಬಳ,ಭತ್ಯೆ ಸೇರಿದಂತೆ ವಿವಿಧ ಭತ್ತೆಗಳನ್ನು ಪರಿಷ್ಕರಿಸು ವ ವೇತನ ಆಯೋಗ ರಚಿಸಬೇಕು ಎನ್ನುವ ಬೇಡಿಕೆ ಇದೆ. ಅದನ್ನು ರಚಿಸುವುದಾಗಿ ಈಗಾಗಲೇ ಸರಕಾರ ಸಿದ್ಧವಿದೆ ಎಂದು ತಿಳಿಸಿದರು.

ಇನ್ನೂ ಹೊಸ ವೇತನ ಆಯೋಗ ರಚನೆ ಮಾಡಿದ ಸಂದರ್ಭದಲ್ಲಿ 70 ರಿಂದ 75 ವರ್ಷ ವಯೋಮಿತಿಯುಳ್ಳ ಸರಕಾರಿ ನಿವೃತ್ತ ನೌಕರರಿಗೂ ಮೂಲ ಪಿಂಚಣಿಯಲ್ಲಿ ಶೇ. 10 ರಿಂದ 15 ರಷ್ಟು ಪಿಂಚಣಿ ಹೆಚ್ಚಿಸುವ ಪ್ರಸ್ತಾವವನ್ನೂ ಸೇರಿಸಿಕೊಳ್ಳುವಂತೆ ಸೂಚಿಸಲಾಗುವುದ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.