ಕಲಬುರಗಿ –
ಮಹಾಮಾರಿ ಕರೋನಾ ಗೆ ರಾಜ್ಯದಲ್ಲಿ ಮತ್ತೊರ್ವ ಶಿಕ್ಷಕಿ ಬಲಿಯಾಗಿದ್ದಾರೆ. ಮಕ್ಕಳು ಶಾಲೆಗೆ ಬಾರದಿದ್ದ ರೂ ಕೂಡಾ ಶಿಕ್ಷಕರ ಹಾಜರಿ ಕಡ್ಡಾಯ ಎಂಬಒಂದು ಇಲಾಖೆಯ ಆದೇಶದಿಂದ ಪ್ರತಿ ದಿನ ಶಾಲೆಗಳಿಗೆ ಶಿಕ್ಷಕರು ಬರುತ್ತಿದ್ದು ಇದರಿಂದ ಕರೋನಾ ಗೆ ಶಿಕ್ಷಕಿ ಯೊಬ್ಬರು ಸಾವಿಗೀಡಾದ ಘಟನೆ ಕಲಬುರಗಿ ಯಲ್ಲಿ ನಡೆದಿದೆ.

ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಹಸರಗುಂಡಗಿ ಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಣುಕಾ ಅವರೇ ಮೃತಪಟ್ಟವರಾಗಿದ್ದಾರೆ. ಕೋವಿಡ್ ಹಿನ್ನಲೆ ಯಲ್ಲಿ ಸಧ್ಯ ಹತ್ತನೇಯ ತರಗತಿ ಮಕ್ಕಳು ಮಾತ್ರ ಶಾಲೆಗಳಿಗೆ ಬರುತ್ತಿದ್ದು ಹೀಗಾಗಿ ಶಿಕ್ಷಕರು ಕಡ್ಡಾಯ ಎಂಬ ಒಂದು ಕಾರಣಕ್ಕಾಗಿ ಬಸ್ ಬಂದ್ ಇದ್ದರೂ ಕೂಡಾ ಪ್ರತಿದಿನ ಶಿಕ್ಷಕರು ಶಾಲೆಗಳಿಗೆ ಬರುತ್ತಿದ್ದು ಸೋಂಕು ಕಾಣಿಸಿಕೊಂಡ ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಿಸದೇ ರೇಣುಕಾ ಟೀಚರ್ ಸಾವಿಗೀಡಾಗಿದ್ದಾರೆ.

ಇನ್ನೂ ಬಂದ್ ಇದ್ದರೂ ಶಿಕ್ಷಕರು ಮಾತ್ರ ಪ್ರತಿದಿನ ಶಾಲೆಗಳಿಗೆ ಬರಬೇಕು ಎಂಬ ಒಂದು ಆದೇಶ ಶಿಕ್ಷಕ ರಿಗೆ ದೊಡ್ಡ ಸಮಸ್ಯೆಯಾಗಿದ್ದು ಇನ್ನಾದರೂ ಎಚ್ಚೆತ್ತು ಕೊಂಡು ಶಿಕ್ಷಣ ಸಚಿವರು ಇಲಾಖೆಯ ಹಿರಿಯ ಅಧಿಕಾರಿಗಳು ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ಯಾಗುವ ಮುನ್ನ ರಜೆಯನ್ನು ಘೋಷಣೆ ಮಾಡಿ ಕೋವಿಡ್ ಸಮಸ್ಯೆಯ ನಡುವೆ ಶಿಕ್ಷಕರಿಗೆ ನೆಮ್ಮದಿ ಯನ್ನು ನೀಡುತ್ತಾರೆ ಎಂಬುದನ್ನು ಕಾದು ನೋಡಬೇ ಕು. ಇನ್ನೂ ಕೋವಿಡ್ ನಿಂದ ಮೃತರಾದ ಶಿಕ್ಷಕಿ ರೇಣುಕಾ ಅವರಿಗೆ ರಾಜ್ಯದ ತುಂಬೆಲ್ಲಾ ಶಿಕ್ಷಕ ಬಂಧುಗಳು ಭಾವಪೂರ್ಣ ಶೃದ್ದಾಂಜಲಿಯನ್ನು ಸಲ್ಲಿಸಿ ನೆನೆದರು. ಇದೇ ವೇಳೆ ಈ ಒಂದು ಕೋವಿಡ್ ನಿಂದ ಶಿಕ್ಷಕರು ಕೂಡಾ ಭಯಗೊಂಡಿದ್ದು ಮುಕ್ತಿ ನೀಡುವಂತೆ ಒತ್ತಾಯವನ್ನು ಮಾಡಿದರು.