ಬೆಂಗಳೂರು –
ಸಾಮಾನ್ಯವಾಗಿ ಕೊರೊನಾ ವಿಚಾರದಲ್ಲಿ ಯಾರೇ ಆಗಲಿ ಸಾರ್ಜಜನಿಕರಲ್ಲಿ ಜಾಗೃತಿ ತಿಳುವಳಿಕೆ ಮೂಡಿಸಬೇಕೆಂದರೆ ಮೊದಲು ತಾವುಗಳು ಅದನ್ನು ಬಳಕೆ ಮಾಡಿ ಇಲ್ಲವೇ ಉಪಯೋಗಿಸುತ್ತಾ ಸಾರ್ವ ಜನಿಕರಲ್ಲಿ ತಿಳುವಳಿಕೆಯನ್ನು ಮೂಡಿಸುತ್ತಾರೆ. ಇದು ಸರ್ವೆ ಸಾಮಾನ್ಯ ರಾಜಕಾರಣಿಗಳಿಂದ ಹಿಡಿ ದು ಸೆಲೆಬ್ರೆಟಿಗಳ ವರೆಗೂ ಸಾಮಾಜಿಕ ಕಾಳಜಿ ಯೊಂದಿಗೆ ಹೀಗೆ ಮಾಡೊದು ಸರ್ವೆ ಸಾಮಾನ್ಯ ಅಂದಾಗ ಮಾತ್ರ ನಮ್ಮ ಸಾರ್ವಜನಿಕರಲ್ಲಿ ಈ ಕುರಿತಂತೆ ಬಳಸಬೇಕು ಉಪಯೋಗ ಮಾಡಬೇಕು ಎಂಬ ಕಲ್ಪನೆ ಬರುತ್ತದೆ.


ಇದು ಇತ್ತೀಚಿಗೆ ಹೆಚ್ಚಾಗಿರುವ ಮಹಾಮಾರಿ ಕರೊ ನಾ ಮಹಾಮಾರಿ ವಿಚಾರದಲ್ಲಿ ಮಾಸ್ಕ್ ಬಳಕೆ ಯಲ್ಲಿ. ಆದರೆ ನಮ್ಮ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಮತ್ತು ಕಾರ್ಯ ದರ್ಶಿ ಜಗದೀಶಗೌಡ್ರ ಪಾಟೀಲ್ ಅವರು ಮಾಸ್ಕ್ ಧರಿಸೋಣ ಕೊರೊನಾ ಓಡಿಸೋಣ ಎಂಬ ಸಂದೇ ಶದೊಂದಿಗೆ ರಾಜ್ಯ ಸರ್ಕಾರಿ ನೌಕರರಿಗೆ ಕರೆ ನೀಡಿ ದ್ದಾರೆ.

ಸರಿ ಸಾರ್ ಒಳ್ಳೇಯ ವಿಚಾರ ಆದರೆ ರಾಜ್ಯಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ತಾವುಗಳು ಮಾಸ್ಕ್ ನ್ನು ಧರಿಸದೇ ಕೊರೊನಾ ಕುರಿತಂತೆ ಸಂದೇಶ ಕೊಟ್ಟಿದ್ದು ನಗೆ ಪಾಟೀಲಿಗೆ ಕಂಡು ಬರುತ್ತಿದೆ. ಇವ ರೇ ಮಾಸ್ಕ್ ಧರಿಸಿಲ್ಲ ಇನ್ನೂ ಬೇರೆಯವರಿಗೆ ಹೇಗೆ ಸಂದೇಶ ಕೊಡುತ್ತಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಕೇಳಿ ಬರುತ್ತಿವೆ. ಸರ್ಕಾರಿ ನೌಕರರು ಸಂಘದ ಸದಸ್ಯರು ಇತರೆ ನೌಕರರು ಟ್ರೋಲ್ ಮಾಡುತ್ತಿದ್ದಾರೆ.