ಉತ್ತರ ಪ್ರದೇಶ –
ದೇಶದಲ್ಲಿ ಮಹಾಮಾರಿ ಕೋವಿಡ್ ಗೆ ಮತ್ತೊಬ್ಬ ರಾಜಕಾರಣಿ ಬಲಿಯಾಗಿದ್ದಾರೆ.ಹೌದು ಇಂದು ಮತ್ತೋರ್ವ ರಾಜಕೀಯ ನಾಯಕನನ್ನು ಬಲಿ ಪಡೆದಿದೆ.ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಸಚಿವ ಹನುಮಾನ್ ಮಿಶ್ರಾ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇವರು ಕೋವಿಡ್ ವೈರಸ್ ತಗುಲಿದ್ದರಿಂದ ಲಕ್ನೋ ನ ಸಂಜಯ್ ಗಾಂಧಿ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಅವರು ಸಾವನ್ನಪ್ಪಿದ್ದಾರೆ
ಹೌದು ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಸಂಖ‍್ಯೆಗಳ ಏರಿಕೆಯಲ್ಲಿ ಮಹಾರಾಷ್ಟ್ರ ನಂತರ ಸ್ಥಾನ ಉತ್ತರ ಪ್ರದೇಶ ಪಡೆದುಕೊಂಡಿದೆ. ಈ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 28,211 ಕೋವಿಡ್‍ನ ಹೊಸ ಪ್ರಕಣಗಳು ದಾಖಲಾಗಿವೆ.
ಕೋವಿಡ್‍ಗೆ ಕಡಿವಾಣ ಹಾಕಲು ಈಗಾಗಲೇ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಲಾಕ್ ಡೌನ್ ಜಾರಿಗೊಳಿಸ ಲಾಗಿದೆ. ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಅದರ ಜತೆಗೆ ಲಸಿಕಾ ಅಭಿ ಯಾನವನ್ನೂ ಚುರುಕುಗೊಳಿಸಲಾಗಿದ್ದು ಸಧ್ಯ ಸಚಿ ವರೊಬ್ಬರ ಸಾವಿನಿಂದಾಗಿ ದೊಡ್ಡ ಆತಂಕ ಮನೆ ಮಾಡಿದೆ