ಹುಬ್ಬಳ್ಳಿ –
ರಾಜ್ಯದ ಗ್ರಾಮೀಣ ವಿಭಾಗದ ಪ್ರಾಥಮಿಕ ಶಾಲಾ ಶಿಕ್ಷಕರ ಬೇದಿಗೆ ರಜೆ ವಿಚಾರ ಕುರಿತು ಕಳೆದ ಹಲ ವಾರು ವರುಷಗಳಿಂದ ಶಿಕ್ಷಕರ ಧ್ವನಿಯಾಗಿ ರಾಜ್ಯದ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೂಡಾ ಧ್ವನಿ ಎತ್ತುತ್ತಲೇ ಬಂದಿತ್ತು.ಕೊನೆಗೂ ಇವರ ಮನವಿಗೆ ರಾಜ್ಯದ ಶಿಕ್ಷಣ ಇಲಾಖೆಯ ಸಚಿವರು ಅಧಿಕಾರಿಗಳು ಸ್ಪಂದಿಸಿ ಬೇಸಿಗೆ ರಜೆ ಘೋಷಣೆ ಮಾಡಿದ್ದಾರೆ

ಪ್ರಮುಖವಾಗಿ ಬೇಸಿಗೆ ರಜೆ ವರ್ಗಾವಣೆ ಕುರಿತು ಕಳೆದ ಹಲವು ದಿನಗಳಿಂದ ಧ್ವನಿ ಎತ್ತುತ್ತಾ ಬರಲಾ ಗಿತ್ತು. ರಾಜ್ಯದ ಗ್ರಾಮೀಣ ಪ್ರದೇಶದ ಶಿಕ್ಷಕರ ಪರವಾಗಿ ಸಂಘ್ ಎತ್ತಿದ ಮನವಿಗೆ ಈ ವರ್ಷದ ಮೊದಲ ಸಾಧನೆಗೆ ಸಂತಸಗೊಂಡಿದ್ದಾರೆ ಸಂಘಟನೆ ಮುಖಂಡರು ಮತ್ತು ಸರ್ವ ಸದಸ್ಯರು

ಇದೇ ವೇಳೆ ರಜೆ ನೀಡಿದ ಮುಖ್ಯಮಂತ್ರಿ ಸಚಿವರು ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಶಿಕ್ಷಕರ ಪರವಾಗಿ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹೇಳಿದ್ದಾರೆ
ಒಟ್ಟಾರೆ ಸಂಘವು ಮತ್ತೊಂದು ಸಾಧ್ಯನೆಯನ್ನು ಮಾಡಿದ್ದು ಸಂಘಟನೆಯ ಕಾರ್ಯಕ್ಕೆ ಇದು ಹಿಡಿದ ಕೈಹನ್ನಡಿಯಾಗಿದೆ ಬರುವ ದಿನಗಳಲ್ಲಿ ವರ್ಗಾವಣೆ ಒಂದನ್ನು ಆರಂಭ ಮಾಡಿಸುವುದೇ ಸಂಘಟನೆಯ ಗುರಿಯಾಗಿದೆ