ಸಿದ್ದಗಂಗಾ ಮಠದಲ್ಲಿ 115 ಮಕ್ಕಳಿಗೆ ಶಿವಮಣಿ ಎಂದು ನಾಮಕರಣ – ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಮಗಳಿಗೆ ಶಿವವಣಿ ಎಂದು ನಾಮಕರಣ ಮಾಡಿಸಿದ ಮುಸ್ಲಿಂ ಧರ್ಮದ ದಂಪತಿಗಳು…..

Suddi Sante Desk

ತುಮಕೂರು –

ನಾಡಿನ ಮಠ ಮಂದಿರಗಲ್ಲಿ ಅತಿ ದೊಡ್ಡ ಭಾವೈಕ್ಯತೆಯ ಸಂದೇಶವನ್ನು ಸಾರುವ ಧಾರ್ಮಿಕ ಕೇಂದ್ರಗಳಲ್ಲಿ ತುಮ ಕೂರಿನ ಸಿದ್ದಗಂಗಾ ಮಠವೂ ಕೂಡಾ ಒಂದಾಗಿದ್ದು ಇನ್ನೂ ಸಿದ್ಧಗಂಗೆಯ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯೊತ್ಸವ ಪ್ರಯುಕ್ತ ಸಿದ್ದಗಂಗಾ ಮಠದ ಆವರಣದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಇನ್ನೂ 115 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಲಾಯಿತು.ವಿಶೇಷವಾಗಿ ಮುಸ್ಲಿಂ ಧರ್ಮದ ದಂಪತಿಗಳು ತಮ್ಮ ಮಗುವಿಗೆ ಶಿವಮಣಿ ಎಂದು ಹೆಸರನ್ನು ನಾಮಕರಣ ಮಾಡಿಸಿದರು.

ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತುಮ ಕೂರು ತಾಲೂಕಿನ ಕ್ಯಾತ್ಸಂದ್ರದ ನಿವಾಸಿ ಶಾಹಿಸ್ತಾ ಹಾಗೂ ಜಮೀರ್ ದಂಪತಿ ತಮ್ಮ ಮಗಳಿಗೆ ಶಿವಮಣಿ ಎಂದು ಹೆಸರಿಟ್ಟರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು ನಮಗೆ ಖುಷಿಯಾಗ್ತಿದೆ.ಸ್ವಾಮೀಜಿ ಅವರ ವಿಚಾರಧಾರೆ ನಮಗೆಲ್ಲ ಮಾದರಿ.ಸಮಾನತೆಯ ಸಂದೇಶ ಸಾರಿದ್ದವರು ಸ್ವಾಮೀಜಿ.ಅವರ ನಡೆಯಲ್ಲೇ ನಾವು ನಡೆಯುತ್ತಿದ್ದೇವೆ ಎಂದರು.ಡಾ. ಶಿವಕುಮಾರ ಮಹಾಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ನಿಂದ ಮಕ್ಕಳಿಗೆ ನಾಮಕರಣ ಮಾಡಲಾ ಯಿತು.ರಾಜ್ಯದ ನಾನಾ ಭಾಗಗಳಿಂದ ಮಠಕ್ಕೆ ಬಂದಿದ್ದ ಮಕ್ಕಳಿಗೆ ನಾಮಕರಣ ಮಾಡುವ ಜೊತೆಗೆ ಮಕ್ಕಳಿಗೆ ಬೇಕಾದ ತೊಟ್ಟಿಲು ಸೇರಿದಂತೆ ಇತರ ಪರಿಕರ ವಿತರಿಸಲಾ ಯಿತು ಎಂದು ಟ್ರಸ್ಟ್ ಸದಸ್ಯರಾದ ಅನುರಾಧ ವಿ.ಪಾಟೀಲ ಹೇಳಿದರು.ಇನ್ನೂ ಕಳೆದ ಮೂರೂ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಇದೊಂ ದು ವಿಭಿನ್ನ ಕಾರ್ಯಕ್ರಮವಾಗಿದ್ದು ಶಿವಕುಮಾರ ಸ್ವಾಮೀ ಜಿ ಅವರ ಹುಟ್ಟುಹಬ್ಬದ ಅಂಗವಾಗಿ ಮಕ್ಕಳಿಗೆ ಹಾಸಿಗೆ, ತೊಟ್ಟಿಲನ್ನು ಉಚಿತವಾಗಿ ನೀಡಲಾಗುತ್ತಿದೆ.ರಾಮನಗರ, ಬೀದರ್,ರಾಯಚೂರು ಸೇರಿದಂತೆ ರಾಜ್ಯದ ಎಲ್ಲ ಭಾಗ ದಿಂದ ಎಲ್ಲ ಧರ್ಮದ ಮಕ್ಕಳು ನಾಮಕರಣದಲ್ಲಿ ಭಾಗಿ ಯಾಗಿದ್ದರು ಎಂದು ಟ್ರಸ್ಟ್ ಅಧ್ಯಕ್ಷ ಜಯಣ್ಣ ಮಾಹಿತಿ ನೀಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.