ಚಾಮರಾಜನಗರ –
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇ ಶದಲ್ಲಿ ಕಳೆದ ವರ್ಷ ನವೆಂಬರ್ ನಲ್ಲಿ ನೀಲಗಿರಿ ಜಿಲ್ಲೆಯ ಗುಡಲೂರು ಸಮೀಪದ ಸಿಂಗಾರ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಅನುಮಾನಾಸ್ಪದವಾ ಗಿ ಸಾವನ್ನಪ್ಪಿ ಘಟನೆಗೆ ಸಂಬಂದಿಸಿದಂತೆ ಹುಲಿಗೆ ವಿಷ ಹಾಕಿ ಹತ್ಯೆ ಮಾಡಿದ ಆರೋಪಿಗಳಿಬ್ಬರನ್ನು ತಮಿಳುನಾಡು ಪೊಲೀಸರು ಬಂಧಿಸಿ ಮತ್ತಿಬ್ಬರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ತಮಿಳುನಾಡಿನ ಗೂಡ್ಲೂರು ಸಮೀಪದ ಸಿಂಗಾರ ಅರಣ್ಯದಲ್ಲಿ ಕಳೆದ ವರ್ಷ ಹುಲಿಯೊಂದು ಅನು ಮಾನಸ್ಪದವಾಗಿ ಮೃತಪಟ್ಟಿತ್ತು.ಮರಣೋತ್ತರ ಪರೀಕ್ಷೆ ಬಳಿಕ ವಿಷ ಸೇವನೆಯಿಂದ ಅದು ಮರಣ ಹೊಂದಿದ್ದು ತಿಳಿದು ಬಂದಿತ್ತು.ಈ ಪ್ರಕರಣದ ತನಿಖೆ ಕೈಗೊಂಡಿದ್ದ ತಮಿಳುನಾಡು ಪೊಲೀಸರು ಇದೀಗ ಇಬ್ಬರು ಆರೋಪಿಗಳಾದ ಅಹಮದ್ ಕಬೀರ್ ಹಾಗೂ ಕರಿಯನ್ ಬಂದಿಸಿದ್ದು ಮತ್ತಿಬ್ಬರ ಬಂಧನ ಕ್ಕೆ ಬಲೆ ಬಿಸಿದ್ದಾರೆ

ಬಂಧಿತ ಆರೋಪಿಗಳು ಹುಲಿಯ ಚರ್ಮ ಹಾಗೂ ಉಗುರುಗಳನ್ನು ಪಡೆಯುವ ದುರುದ್ದೇಶದಿಂದ ಹುಲಿಗಳಿಗೆ ವಿಷ ಹಾಕಿ ಹತ್ಯೆ ಮಾಡುತ್ತಿದ್ದರು. ಈ ಮೊದಲು ಇವರು ಸಾಕಷ್ಟು ಪ್ರಾಣಿಗಳನ್ನು ಇದೇ ರೀತಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ತನಿಖೆ ಯಿಂದ ಎಲ್ಲವೂ ಹೊರ ಬರಲಿದೆ

ಬಂಧಿತ ಆರೋಪಿಗಳನ್ನು ಗೂಡ್ಲೂರು ನ್ಯಾಯಾಲ ಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿ ದ್ದಾರೆ