ಆಡಳಿತ ಯಂತ್ರ ಯಶಶ್ವಿಯಾಗಲು ಸರ್ಕಾರಿ ನೌಕರರ ಕಾರ್ಯ ಕ್ಷಮತೆ ಮುಖ್ಯ – ರಾಜ್ಯಾಧ್ಯಂತ ಸಡಗರ ಸಂಭ್ರಮದಿಂದ ನಡೆಯಿತು ಸರ್ಕಾರಿ ನೌಕರರ ದಿನಾಚರಣೆ…..

Suddi Sante Desk

ಮಂಗಳೂರು –

ಸರ್ಕಾರ ಹಾಗೂ ಜಿಲ್ಲಾ‌ ಆಡಳಿತ ಯಶಸ್ವಿ ಅಗಲು ಹಾಗೇ ಎಲ್ಲ ವರ್ಗದ ನೌಕರರ ಕಾರ್ಯ ದಕ್ಷತೆ ಅಗತ್ಯವಾಗಿದ್ದು ಕೋವಿಡ್ ಸಂದರ್ಭದಲ್ಲಿ ಸಿಬ್ಬಂದಿ ತೋರಿಸಿದ ಕಾರ್ಯ ಕ್ಷಮತೆ ಶ್ಲಾಘನೀಯ ಎಂದು ಮಂಗಳೂರು ಜಿಲ್ಲಾಧಿಕಾರಿ ಡಾ ರಾಜೇಂದ್ರ ಹೇಳಿದರು.ನಗರದ ಪುರಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದ ಅವರು ಸರ್ಕಾರಿ ಕೆಲಸಕ್ಕೆ ಸೇರುವಾಗ ಜನರಿಗೆ ಉತ್ತಮ ಸೇವೆ ನೀಡಬೇಕು ಎಂಬ ಹಂಬಲದಿಂದ ಸೇರಿರುತ್ತೇವೆ. ಜನರ ಕಷ್ಟಗಳಿಗೆ ಸ್ಪಂದಿಸುವ ಭಾವನೆ ನಮ್ಮೆಲ್ಲರಲ್ಲಿ ಬರಬೇಕು ಎಂದರು.

ಇನ್ನೂ ಕರ್ತವ್ಯದ ಅವಧಿಯಲ್ಲಿ ನಾವು ಮಾಡುವ ಕೆಲಸ ದಲ್ಲಿ ಬದ್ಧತೆ ಅಗತ್ಯ ನೌಕರರ ದಿನಾಚರಣೆ ವೇಳೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ನಮ್ಮಲ್ಲಿ ಬದಲಾಗಬೇಕು ಎಂಬ ಭಾವನೆ ಬಂದರೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯವನ್ನು ನಿರ್ವಹಿಸಿದ ಹಲವು ಸರ್ಕಾರಿ ನೌಕರ ಬಂಧುಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ವಿತರಣೆ ಮಾಡಲಾಯಿತು.ಜೊತೆಗೆ ಪ್ರತಿಭಾ ಪುರಷ್ಕಾರವನ್ನು ನೀಡಲಾಯಿತು.ಈ ಒಂದು ಸಮಯ ದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಸರ್ಕಾರಿ ನೌಕರರು ಸಂಘಟನೆಯ ಮುಖಂ ಡರು ಸೇರಿದಂತೆ ಹಲವರು ಉಪಸ್ಥಿತರಿದ್ದು ಕಾರ್ಯಕ್ರ ಮಕ್ಕೆ ಮೆರಗನ್ನು ತಂದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.