ಮುಖ್ಯ ಶಿಕ್ಷಕರಿಗೆ ಬಡ್ತಿ ವಿಚಾರ ಮಹತ್ವದ ಸಭೆ – ಬಿ‌ ಟಿ ಗೌಡರ ನೇತೃತ್ವದಲ್ಲಿ ಸಭೆ ಹಲವು ಮಹತ್ವದ ತೀರ್ಮಾನ…..

Suddi Sante Desk

ಬೆಂಗಳೂರು –

ಮುಖ್ಯ ಗುರುಗಳ ಬಡ್ತಿ ನೀಡುವ ವಿಚಾರಕ್ಕೆ ವಿಜಯಪುರ ದಲ್ಲಿ ಜಿಲ್ಲಾ ಅಧ್ಯಕ್ಷ ಬಿ ಟಿ ಗೌಡರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.ಹೌದು ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಸುರೇಶ ಶಡಶ್ಯಾಳರ ಮಾರ್ಗದರ್ಶನದಂತೆ ಇಂದು ಮಾನ್ಯ ಜಿಲ್ಲಾ ಉಪನಿರ್ದೇಶಕರೊಡನೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹತ್ವದ ಸಭೆ ಜರುಗಿತು.ಬೇಗನೆ ಈಗಾಗಲೇ ಪ್ರಕಟಿಸಿರುವ ಜೇಷ್ಠತಾ ಪಟ್ಟಿಯಲ್ಲಿನ ದೋಷಗಳಿಗೆ ಆಕ್ಷೇಪಣೆಗಳನ್ನು ಸೂಕ್ತವಾಗಿ ಪರಿಶೀಲನೆ ಮಾಡಿ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸು ವಂತೆ ಒತ್ತಾಯವನ್ನು ಮಾಡಲಾಯಿತು

ಇನ್ನೂ SATS ನಲ್ಲಿನ ಮಕ್ಕಳ ಸಂಖ್ಯೆಯಂತೆ ಖಾಲಿ ಹುದ್ದೆ ಗಳನ್ನು ಬೇಗ ಪ್ರಕಟಿಸುವುದು.ಇಂದಿನ ಸಭೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು,ಜಿಲ್ಲಾ ಅಧ್ಯಕ್ಷ ಬಿ ಟಿ ಗೌಡರ,ಜಿಬೇರ ಕೆರೂರ,ಜಗದೀಶ ಬೋಳಸೂರ,ಎಸ್ ಎಸ್ ಪಾಟೀಲ,ಸೊನ್ನಗಿ ಹಾಗೂ ಇತರರು ಹಾಜರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.