ಬೆಂಗಳೂರು –
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕರೋ ನಾ ಅಬ್ಬರ ಜೋರಾಗುತ್ತಿದೆ. ಒಂದು ಕಡೆ ಕರೋನಾ ಅಬ್ಬರ ಮತ್ತೊಂದು ಕಡೆಗೆ ಶಾಲೆಗೆ ಹೋಗಲು ಪರ ದಾಟ ಪ್ರತಿದಿನ ಜೀವವನ್ನು ಕೈಯಲ್ಲಿ ಹಿಡಿದುಕೊಂ ಡು ಶಾಲೆಗೆ ಹೋಗುವ ಸ್ಥಿತಿ ಇನ್ನೂ ಇವತ್ತು ವರ್ಷದ ಶೈಕ್ಷಣಿಕ ದಿನದ ಕೊನೆಯ ದಿನ ಇತ್ತ ಬೆಂಗಳೂರಿ ನಲ್ಲಿ ಸಚಿವ ಸಂಪುಟದ ಸಭೆ ಹೀಗಾಗಿ ಇವತ್ತಾದ ರೂ ವರ್ಗಾವಣೆಯ ಕುರಿತು ನಾಡಿನ ಶಿಕ್ಷಕರು ಸಿಹಿ ಸುದ್ದಿ ಸಿಗುತ್ತದೆನಾ ಎಂಬ ಒಂದು ನಿರೀಕ್ಷೆಯಲ್ಲಿದ್ದಾ ರೆ

ಹೌದು ಮುಖ್ಯವಾಗಿ ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ವರ್ಗಾವಣೆ ವಿಚಾರ ಕುರಿತಂ ತೆ ಈವರೆಗೆ ಧ್ವನಿ ಎತ್ತುತ್ತಿರುವ ಶಿಕ್ಷಕರಿಗೆ ಮಾತ್ರ ಈವರೆಗೆ ಯಾವುದೇ ದಾರಿಯಿಂದಲೂ ಸಿಹಿ ಸುದ್ದಿ ಮಾತ್ರ ಸಿಗುತ್ತಿಲ್ಲ.ಕೇಳಿ ಕೇಳಿ ಬೇಸತ್ತಿರುವ ಶಿಕ್ಷಕ ಸಮುದಾಯದವರು ವರ್ಗಾವಣೆ ಎಂದರೆ ಏನು ಎಂಬ ಪ್ರಶ್ನೆಗೆ ಉತ್ತರವಿಲ್ಲದೇ ಅಸಹಾಯಕರಾಗಿ ದ್ದಾರೆ. ಅಲ್ಲದೇ ಏನೇನೋ ಕಷ್ಟ ಪಡುತ್ತಿರುವ ನೋವುಗಳನ್ನು ಅವರಿವರ ಮುಂದೇ ಹೇಳಿಕೊಳ್ಳು ತ್ತಾ ಕಾಲ ಕಳೆಯುತ್ತಿದ್ದಾರೆ ಹೊರತು ಈವರೆಗೆ ಯಾವುದೇ ಫಲಿತಾಂಶ ಮಾತ್ರ ಸಮುದಾಯಕ್ಕೆ ಯಾರಿಂದಲೂ ಸಿಗುತ್ತಿಲ್ಲ ಸಿಗುತ್ತಿಲ್ಲ.

ಆದರೂ ನಂಬಿಕೆ ಎಂಬ ದೊಡ್ಡ ಭರವಸೆಯ ನಡು ವೆ ಇನ್ನೂ ಆಗುತ್ತದೆ ಎಂದುಕೊಂಡು ನಿಷ್ಠೇ ಪ್ರಾಮಾ ಣಿಕತೆಯಿಂದ ಸೇವೆಯನ್ನು ಮಾಡ್ತಾ ಇದ್ದಾರೆ.ಇದು ಒಂದು ವಿಚಾರವಾದರೆ ಸಧ್ಯವಂತೂ ದೇಶ ಸೇರಿ ದಂತೆ ನಮ್ಮ ರಾಜ್ಯದಲ್ಲೂ ಕೂಡಾ ಕರೋನಾ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ಅಬ್ಬರವನ್ನು ಹೆಚ್ಚು ಮಾಡುತ್ತಿದೆ. ಎಲ್ಲಾ ವಲಯಗಳಲ್ಲೂ ಸಮು ದಾಯದ ರೀತಿಯಲ್ಲಿ ಹಬ್ಬುತ್ತಿದ್ದು ಹೀಗಾಗಿ ಶಿಕ್ಷಕರು ಕೂಡಾ ಆತಂಕಗೊಂಡಿದ್ದಾರೆ.

ಬೇಸಿಗೆ ತಾಪಮಾನ ದಿನದಿಂದ ದಿನಕ್ಕೆ ಕೌಟುಂಬಿಕ ಸಮಸ್ಯೆ ಹೆಚ್ಚಾಗುತ್ತಿವುದರಿಂದ ಶಿಕ್ಷಕರ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತಿದ್ದು ಸರಿ ಯಾದ ವಾಹನಗಳ ಸೌಲಭ್ಯಗಳಿಲ್ಲದೇ ಕರ್ತವ್ಯಕ್ಕೆ ಹಾಜರಾಗಲು ಹರಸಾಹಸ ಪಡುತ್ತಿದ್ದು ಅದರಲ್ಲೂ ಮಹಿಳಾ ಶಿಕ್ಷಕಿಯರ ಪರಸ್ಥಿತಿಯಂತೂ ಹೇಳೊದೆ ಬೇಡ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಇನ್ನಾ ದರೂ ಶಿಕ್ಷಣ ಇಲಾಖೆ ಅದರಲ್ಲೂ ಜನಪ್ರೀಯ ಶಿಕ್ಷ ಣ ಸಚಿವರು ಮತ್ತು ನಾನೊಬ್ಬ ಶಿಕ್ಷಕಿಯ ಮಗ ಎಂದು ಬಿಂಬಿಸಿಕೊಳ್ಳುತ್ತಿರುವ ಸನ್ಮಾನ್ಯ ಸುರೇಶ್ ಕುಮಾರ್ ಅವರು ಇವತ್ತಿನ ಸಚಿವ ಸಂಪುಟದ ಸಭೆಯಲ್ಲಿ ಸಮಸ್ಯೆಗಳಿಗೆ ತೀಲಾಂಜಲಿ ನೀಡತಾರೆ ನಿಮ್ಮ ಸಂದೇಶದ ನಿರೀಕ್ಷೆಯಲ್ಲಿ ರಾಜ್ಯ ಸಮಸ್ತ ಶಿಕ್ಷಕ ಸಮುದಾಯದವರು ಕಾಯುತ್ತಿದ್ದಾರೆ.ನಿಮ್ಮ ಮೇಲಿಟ್ಟ ಭರವಸೆಯನ್ನು ಹುಸಿಗೊಳಿಸೊದಿಲ್ಲ ಎಂಬ ಅಚಲವಾದ ನಂಬಿಕೆ ಶಿಕ್ಷಕರದ್ದಾಗಿದ್ದು ಬೇಗನೆ ಈ ಒಂದು ಕಾರ್ಯ ಕೆಲಸವಾಗಲಿ
ಮಂಜು ಸರ್ವಿ ವರದಿಗಾರರು ಸುದ್ದಿ ಸಂತೆ