CID ಮುಂದೆ ಅಕ್ರಮದ ಮಾಹಿತಿ ಬಿಚ್ಚಿಟ್ಟ ಮುಖ್ಯೋಪಾಧ್ಯಾಯ ಇಂಥವರಿಂದಲೇ ಶಿಕ್ಷಕರ ಗೌರವ ಮೂರು ಕಾಸಿಗೆ ಹರಾಜು…..

Suddi Sante Desk

ಕಲಬುರಗಿ –

ಪಿಎಸ್‌ಐ ಪರೀಕ್ಷೆಯ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದ ಬಂಧನವಾಗಿರುವ ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಈಗಾಗಲೇ ಪೊಲೀಸ ರಿಗೆ ಶರಣಾಗಿದ್ದು ಶಾಲೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ಬಹುತೇಕರು ಈಗ ಬಂಧನವಾದಂತಾಗಿದೆ.ಕಳೆದ 22 ದಿನ ಗಳಿಂದ ತಲೆಮರೆಸಿಕೊಂಡಿದ್ದ ಕಾಶಿನಾಥ್ ಸಿಐಡಿ ತಂಡದ ಎದುರಿಗೆ ಶರಣಾಗಿದ್ದು ಅಕ್ರಮದ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ

ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಬಳಕೆ ಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಪ್ರಮುಖ ಪಾತ್ರ ವಹಿಸಿದ್ದರಂತೆ.

ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅಕ್ರಮದಲ್ಲಿ ಶಾಲೆಯ ಮುಖ್ಯ ಗುರು ಕಾಶಿನಾಥ್ ‌ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಐಡಿ ತಂಡದ ಎದುರು ಹೇಳಿದ್ದರಿಂದ ಕಾಶಿನಾಥ್ ಶರಣಾಗತಿ ಅತ್ಯಂತ ಮಹತ್ವ ಪಾತ್ರ ವಹಿಸಿದೆ.ಇದರಿಂದ ಬಂಧಿತರ ಸಂಖ್ಯೆ 26ಕ್ಕೆ ಏರಿದಂತಾಗಿದೆ.‌

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.