ಹುಬ್ಬಳ್ಳಿ –
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಅನಗತ್ಯ ತಿರುಗಾಟವನ್ನು ನಿಷೇಧ ಮಾಡಲಾಗಿದೆ. ದಿನದಿಂದ ದಿನಕ್ಕೆ ಅದರಲ್ಲೂ ಜಿಲ್ಲೆಯಲ್ಲಿ ಸೋಂಕು ಹೆಚ್ಚುತ್ತಿರು ವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಈ ಒಂದು ಆದೇಶವನ್ನು ಮಾಡಲಾಗಿದೆ.
ರೋಗಿ ಮತ್ತು ಪರಿಚಾರಕರಿಗೆ ಈವರೆಗೂ ಅನುಮ ತಿ ಇತ್ತು.ಇದರ ದುರುಪಯೋಗದ ಹಿನ್ನೆಲೆಯಲ್ಲಿ ಈ ಒಂದು ಖಡಕ್ ಆದೇಶವನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದಾರೆ.
ಆಸ್ಪತ್ರೆಯ ಆವರಣದಲ್ಲಿ ಅನಗತ್ಯ ಓಡಾಡುತ್ತಿರುವ ಸಾರ್ವಜನಿಕರು ನಾವು ರೋಗಿಯ ಕಡೆಯವನು ಎಂದು ನೆಪ ಹೇಳಿಕೊಂಡು ಓಡಾಟ ಮಾಡುತ್ತಿರುವ ವರಿಗೆ ಕಡಿವಾಣವನ್ನು ಹಾಕಲಾಗಿದೆ.
ರೋಗಿಯ ಕಡೆಯವರ ಗುರುತಿನ ಚೀಟಿ ಇದ್ರೆ ಮಾತ್ರ ಎಂಟ್ರಿ.ಯಾರೇ ಬಂದ್ರೂ ದಾಖಲೆ ಕಡ್ಡಾಯ ವನ್ನು ಮಾಡಲಾಗಿದೆ.ವ್ಯಾಕ್ಸಿನ್ ಪಡೆಯುವವರಿಗೆ ಮತ್ತು ರೋಗಿಗಳಿಗೆ ಮಾತ್ರ ಅವಕಾಶವನ್ನು ನೀಡ ಲಾಗಿದೆ.ಇವರನ್ನು ಹೊರತುಪಡಿಸಿ ಹಾಗೇನಾದರೂ ಯಾರೇ ಉಳಿದವರು ಇಲ್ಲಿ ತಿರುಗಾಡಿದರೆ ಅವರಿಗೆ ಖಂಡಿತವಾಗಿಯೂ ದಂಡ ಬೀಳುತ್ತೆ