ಬೆಂಗಳೂರು –
ಇಂದು ಒಂದೇ ದಿನ ರಾಜ್ಯದ ತುಂಬೆಲ್ಲಾ ಹತ್ತು ಜನ ಶಿಕ್ಷಕರು ಸಾವಿಗೀಡಾಗಿದ್ದಾರೆ. ಬೇರೆ ಬೇರೆ ಖಾಯಿಲೆ ಯಿಂದ ಬಳಲುತ್ತಿದ್ದವರು ಮತ್ತು ಕರೋನಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಶಿಕ್ಷಕರು ನಾಡಿನ ಬೇರೆ ಬೇರೆ ಕಡೆಗಳಲ್ಲಿ ಸಾವಿಗೀಡಾಗಿದ್ದಾರೆ. ಹೀಗೆ ರಾಜ್ಯದ ತುಂಬೆಲ್ಲಾ ಇಂದು ಅಲ್ಲಲ್ಲಿ ಹತ್ತು ಜನ ಶಿಕ್ಷಕರು ನಿಧನರಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ತುಂಬಲಾರದ ದುಖಃವಾಗಿದೆ.ಇನ್ನೂ ರಾಜ್ಯದಲ್ಲಿ ಒಟ್ಟು ಹತ್ತಕ್ಕೂ ಹೆಚ್ಚು ಶಿಕ್ಷಕರು ಸಾವಿಗೀ ಡಾಗಿದ್ದು ಎಲ್ಲಿ ಎಲ್ಲಿ ಯಾರು ಯಾರು ಸಾವಿಗೀಡಾ ಗಿದ್ದಾರೆ ಎಂಬ ಕುರಿತಂತೆ ನೊಡೋದಾದರೆ
ಆರ್ ಎನ್ ಲೋನಿ ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರು. ಕೋವಿಡ್ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆಯನ್ನು ಪಡೆಯುತ್ತಿದ್ದರು ಚಿಕಿತ್ಸೆ ಫಲಿಸದೇ ಇಂದು ಸಾವಿಗೀಡಾಗಿದ್ದಾರೆ.ನಿಂಗಮ್ಮ ರೊಳ್ಳಿ ಬಸವನಬಾಗೇವಾಡಿಯ ಹತ್ತರಕಿಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾ ಗಿದ್ದರು.ಇವರಿಗೂ ಕೂಡಾ ಸೋಂಕು ಕಾಣಿಸಿಕೊಂ ಡು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಆಸ್ಪತ್ರೆಯಲ್ಲಿ ಕೋವಿಡ್ ಗೆ ಸಾವಿಗೀಡಾಗಿ ದ್ದಾರೆ.
ಇನ್ನೂ ಮುಸ್ಕಾಕ್ ಹೊಂಬರ್ಡಿ ದೈಹಿಕ ಶಿಕ್ಷಕರು ಇಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇವರಿ ಗೂ ಕೂಡಾ ಕಳೆದ ಒಂದು ವಾರದ ಹಿಂದೆ ಸೋಂಕು ಕಾಣಿಸಿಕೊಂಡಿತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಮುಸ್ತಾಕ್ ಸರ್ ಇಂದು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.ಇನ್ನೂ ಎ ಎನ್ ಅವ ಟಿ ದೈಹಿಕ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅತಾಲಟ್ಟಿ ಇವರು ಕೂಡಾ ಮಹಾಮಾರಿಗೆ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಬಿ ಎಸ್ ಹಳ್ಳಿ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರಾಥಮಿಕ ಶಾಲೆ ಮಹಾತ್ಮ ಗಾಂಧೀ ಪ್ರೌಢ ಶಾಲೆ ವಿಜಯಪುರ ಇವರು ಕೂಡಾ ಇಂದು ಸಾವಿಗೀಡಾಗಿದ್ದಾರೆ. ಕೋವಿ ಡ್ ಸೋಂಕು ಹಿನ್ನಲೆಯಲ್ಲಿ ಇವರು ಕೂಡಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಡಿ ಬಿ ಧನಶೆಟ್ಟಿ ಹಿಂದಿ ಶಿಕ್ಷಕರು ಯಲ್ಲಾಲಿಂಗ ಪ್ರೌಢ ಶಾಲೆ ಇಂಡಿಯ ಮಿರ ಗಿ ಗ್ರಾಮದ ಶಿಕ್ಷಕರು ಇವರು ಕೂಡಾ ನಿಧನರಾಗಿ ದ್ದಾರೆ.ಇದರೊಂದಿಗೆ ಗುರುನಾಥ ಭಂಡಾರಕರ ಶಿಕ್ಷ ಕರು ಸರ್ಕಾರಿ ಪ್ರೌಢಶಾಲೆ ಗೋಳಸಾರ ಹಾಗೇ ಈರಪ್ಪ ಮಲಬಾರಿ ಪ್ರಾಚಾರ್ಯರು ಮುರಾರ್ಜಿ ವಸತಿ ಶಾಲೆ ದೇವರಹಿಪ್ಪರಗಿ ಇವರು ಕೂಡಾ ಈ ಒಂದು ಮಹಾಮಾರಿಗೆ ಬಲಿಯಾಗಿದ್ದಾರೆ. ಹೀಗೆ ಇಂದು ಒಂದೇ ದಿನ ರಾಜ್ಯದ ತುಂಬೆಲ್ಲಾ ಒಟ್ಟು ಹತ್ತಕ್ಕೂ ಹೆಚ್ಚು ಶಿಕ್ಷಕರು ಸಾವಿಗೀಡಾಗಿದ್ದಾರೆ.
ಇತ್ತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವೂ ಕೂಡಾ ಸಂತಾಪವನ್ನು ಸೂಚಿಸಿದೆ. ಸಂಘದ ಶಂಭುಲಿಂಗನಗೌಡ ಪಾಟೀಲ.ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹಾಗೇ ಸುರೇ ಶ ಶೇಡಶ್ಯಾಳ,ಬಿ ಟಿ ಗೌಡರ,ಜುಬೇರ ಕೆರೂರ,ಜೆ ಎಸ್ ಬಾಲೇಸೂರ,ಹೆಚ್ ಬಿ ಕೊನಾಡಿ ಸೇರಿದಂತೆ ಸಂಘದ ಸರ್ವ ಸದಸ್ಯರು ಒಂದೇ ದಿನ ಮೃತರಾದ ಮೂವರು ಶಿಕ್ಷಕರಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ