ಪ್ರಾಧ್ಯಾಪಕರ ನಿಯೋಜನೆ ರದ್ದು ಮಾಡಿ ವರ್ಗಾವಣೆಗಾಗಿ ಸಚಿವರ ಕಚೇರಿ ಮುಂದೆ ಮರಿತಿಬ್ಬೇಗೌಡ‌ ಸೇರಿದಂತೆ ಹಲವರು ಧರಣಿ…..

Suddi Sante Desk

ಬೆಂಗಳೂರು –

ಪದವಿ ತರಗತಿಗಳಲ್ಲಿ ಪರೀಕ್ಷೆ ನಡೆಯುತ್ತಿದೆ, ಮೌಲ್ಯಮಾ ಪನ ಪ್ರಾರಂಭವಾಗಿದೆ.ಏಳೆಂಟು ವರ್ಷಗಳಿಂದ ನಿಯೋ ಜನೆ ಮೇಲೆ ಇದ್ದ 1000 ಹೆಚ್ಚು ಮಂದಿ ಪ್ರಾಧ್ಯಾಪಕರ ನಿಯೋಜನೆ ರದ್ದು ಮಾಡಿದ್ದಾರೆ.ಮಧ್ಯ ರಾತ್ರಿಯಲ್ಲಿ ಈ‌ ಆದೇಶ ಮಾಡಲಾಗಿದೆ.ಇದರಿಂದ ಸಾಕಷ್ಟು ಸಮಸ್ಯೆ ಆಗಲಿ ದೆ ಎಂದು ಪರಿಷತ್ ಸದಸ್ಯ ಮರಿತಿಬ್ಬೇಗೌಡ‌ ಹೇಳಿದ್ದಾರೆ. ಸಚಿವ ಅಶ್ವತ್ಥ ನಾರಾಯಣ ಕಚೇರಿ ಮುಂದೆ ಧರಣಿ ನಡೆಸಿ ಪದವಿ ಕಾಲೇಜುಗಳ ಸಹಾಯಕ ಹಾಗೂ ಸಹ ಪ್ರಾಧ್ಯಾ ಪಕರ ನಿಯೋಜನೆ ರದ್ದು ಹಾಗೂ ಕಡ್ಡಾಯ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಇವರು ಬಿಡುಗಡೆಗೊಂಡ ಬಳಿಕ ಇವರ ಸ್ಥಾನದಲ್ಲಿ ನಿಯೋಜನೆಗೊಂಡ ಅಥಿತಿ ಉಪನ್ಯಾ ಸಕರು ಕೆಲಸ ಕಳೆದುಕೊಳ್ಳುತ್ತಾರೆ.

ನಿಯೋಜನೆ ರದ್ದು ಮಾಡಿದ್ದರಿಂದ ಅವರ ಜಾಗಕ್ಕೆ ಮೂರು ಸಾವಿರ ಅಥಿತಿ ಉಪನ್ಯಾಸಕರನ್ನು ನೇಮಕ ಮಾಡಬೇಕಾ ಗುತ್ತದೆ ಎಂದರು.ನಿಯೋಜನೆ ರದ್ದು ಮಾಡಿ‌ ಮೂಲ ಸ್ಥಾನಕ್ಕೆ ಕಳುಹಿಸುವ ಬಗ್ಗೆ ವಿರೋಧ ಇಲ್ಲ.ಆದರೆ ಹತ್ತಾರು ವರ್ಷಗಳಿಂದ ನಿಯೋಜನೆಗೊಂಡಿದ್ದ ಅಷ್ಟು ಜನರನ್ನು ಒಮ್ಮೆಲೆ ರದ್ದು ಮಾಡುವುದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ.ಈ ನಿಟ್ಟಿನಲ್ಲಿ ಮೂರು ಹಂತದಲ್ಲಿ ಈ ಪ್ರಕ್ರಿಯೆ ಮಾಡಬೇಕಿತ್ತು.ಇದರಲ್ಲಿ ವಿಕಲ ಚೇತನರು ಪತಿ ಪತ್ನಿ ಪ್ರಕರಣದವರು ಕ್ಯಾನ್ಸರ್ ರೋಗಿಗಳು ಇದ್ದಾರೆ. ನಿಯೋಜನೆ ರದ್ದು ಸಂದರ್ಭದಲ್ಲಿ ಇದನ್ನು ಪರಿಗಣಿಸಿಲ್ಲ ಎಂದು ಸಚಿವರಿಗೆ ಪತ್ರ ಬರೆದಿದ್ದೆ ಸಭೆ ಕರೆದು ಚರ್ಚಿಸು ವಂತೆ ಮನವಿ ಮಾಡಿದ್ದೆ.ಆ ಪತ್ರಕ್ಕೆ ಉತ್ತರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಳೆದ ತಿಂಗಳು 25 ರಿಂದ 28 ತಾರೀಕಿನವರೆಗೆ 900 ಸಹಾಯಕ ಪ್ರಾಧ್ಯಾಪಕರ ವರ್ಗಾವಣೆ ನಡೆದಿದೆ. ಆ ವರ್ಗಾವಣೆ ಅವೈಜ್ಞಾನಿಕವಾಗಿ ನಡೆದಿದೆ. ಬೆಂಗಳೂರಿನಲ್ಲಿ‌ 25 ವರ್ಷ ಕೆಲಸ ಮಾಡಿದವ ರನ್ನು ಮತ್ತೆ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಕೆಲವರು ಫೇಕ್ ಸರ್ಟಿಫಿಕೇಟ್ ಕೊಟ್ಟು ಬೆಂಗಳೂರು ಮಂಗಳೂರು,ಮೈಸೂರಿಗೆ ವರ್ಗಾವಣೆ ಆಗಿದ್ದಾರೆ. ಸತ್ಯಾ ಸತ್ಯತೆಯನ್ನು ಈ ಸಂದರ್ಭದಲ್ಲಿ ಚೆಕ್ ಮಾಡಿಲ್ಲ.ಇದು ಕೂಡಾ ಅವೈಜ್ಞಾನಿಕ ಈ‌ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.