ಶಿರಾ –
ಯುವ ಉತ್ಸಾಹಿ ಸದಾ ಹಸನ್ಮುಖಿಯಾಗಿರುತ್ತಿದ್ದ ಸಹ ಶಿಕ್ಷಕ ಲಿಂಗರಾಜು ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ.ಶಿರಾ ತಾಲ್ಲೂಕಿನ ಗೋಣಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾ ಗಿದ್ದರು.ಮಹಾಮಾರಿ ಕೋವಿಡ್ ಗೆ ಸೋಂಕು ಕಾಣಿ ಸಿಕೊಂಡಿತ್ತು ಅನಾರೋಗ್ಯ ದಿಂದ ಜ್ವರ ಸುಸ್ತು ಎಂ ದು ಆರೋಗ್ಯ ತಪಾಸಣೆ ಮಾಡಿಸಿದ ಸಂದರ್ಭ ದಲ್ಲಿ ಕೋವಿಡ್ ಪಾಸಿಟಿವ್ ಬಂದ ಕಾರಣ ಕೋವಿ ಡ್ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರು.ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಪಾರ ವಾದ ಸ್ನೇಹಿತರನ್ನು ಅಗಲಿದ್ದಾರೆ.
ಇನ್ನೂ ಮೃತರಾದ ಯುವ ಶಿಕ್ಷಕ ಲಿಂಗರಾಜ ನಿಧನ ಕ್ಕೆ ರಾಜ್ಯ ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷರು, ಹಾಗೂ ರಾಜ್ಯ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರು ನಾಡಿನ ಮೂಲೆಮೂಲೆಗಳಿಂದ ಶಿಕ್ಷಕರು ಸಂತಾಪ ಸೂಚಿಸಿ ಕುಟುಂಬಕ್ಕೆ ಸೂಕ್ತವಾ ದ ಪರಿಹಾರವನ್ನು ನೀಡುವಂತೆ ಹಾಗೇ ಸೌಲಭ್ಯಗ ಳನ್ನು ಕಲ್ಪಿಸುವಂತೆ ಒತ್ತಾಯವನ್ನು ಮಾಡಿದ್ದಾರೆ