ಹೊಸ ತಿರುವು ಪಡೆದುಕೊಂಡ ಹೆಡ್‌ ಕಾನ್‌ಸ್ಟೆಬಲ್‌ ಆತ್ಮಹತ್ಯೆ ಪ್ರಕರಣ – ಸಾವಿಗೆ ಇಲಾಖೆಯ ಸಿಬ್ಬಂದಿ ಅಧಿಕಾರಿಗಳೇ ಕಾರಣ ಪತ್ತೆಯಾಗಿದೆ ಡೆತ್ ನೋಟ್…..

Suddi Sante Desk

ಉಡುಪಿ –

ಸಶಸ್ತ್ರ ಮೀಸಲು ಪಡೆಯ ಹೆಡ್‌ ಕಾನ್‌ಸ್ಟೆಬಲ್‌ ರಾಜೇಶ್ ಕುಂದರ್‌ ಸಾವಿನ ಪ್ರಕರಣಕ್ಕೆ ಈಗ ಒಂದು ಹೊಸ ತಿರುವು ಸಿಕ್ಕಿದೆ.ಹೌದು ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್‌ ಪತ್ತೆಯಾಗಿದ್ದು ಡಿಎಆರ್‌ ಎಪಿಸಿಗಳಾದ ಉಮೇಶ್‌ ಹಾಗೂ ಅಶ್ಫಕ್‌,ಗಂಗೊಳ್ಳಿ ಠಾಣೆಯ ಪಿಎಸ್‌ಐ ನಂಜಪ್ಪ ತನ್ನ ಸಾವಿಗೆ ಕಾರಣ ಎಂದು ರಾಜೇಶ್‌ ಕುಂದರ್‌ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.ಹೀಗಾಗಿ ಆರೋಪಿ ಗಳ ವಿರುದ್ಧ 306 ಆರ್‌ಡಬ್ಲ್ಯು 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ರಾಜೇಶ್‌ ಕುಂದರ್ ಜತೆ ಆದಿ ಉಡುಪಿ ಶಾಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಉಡುಪಿ ಡಿಎಆರ್‌ ಘಟಕದ ಕಾನ್‌ಸ್ಟೇಬಲ್‌ ಗಣೇಶ್‌ ಶನಿವಾರ ಕರ್ತವ್ಯ ಮುಗಿಸಿಕೊಂಡು ಡಿಎಆರ್‌ ಮುಖ್ಯ ಕಚೇರಿಗೆ ಬಂದು ಕಿಟ್‌ ಬಾಕ್ಸ್‌ ಪರೀಶಿಲಿಸಿದ್ದಾರೆ.ಈ ಸಂದರ್ಭ ಬ್ಯಾಗ್‌ನಲ್ಲಿದ್ದ ಸಮವಸ್ತ್ರ ಹಾಗೂ ಬೆಡ್‌ಶೀಟ್ ಹೊರತೆಗೆದಾಗ ಡೆತ್‌ ನೋಟ್‌ ಪತ್ತೆಯಾಗಿದೆ.ಮಾಹಿತಿಯನ್ನು ಮೇಲಧಿಕಾರಿ ಗಳಿಗೆ ತಿಳಿಸಿದ ಗಣೇಶ್‌ ಡೆತ್‌ನೋಟ್‌ ಅನ್ನು ನಗರ ಠಾಣೆಗೆ ಹಾಜರುಪಡಿಸಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.ಇದಕ್ಕೂ ಮುನ್ನ ಕರ್ತವ್ಯ ನಿರತರಾಗಿದ್ದ ಸಂದರ್ಭ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ರಾಜೇಶ್ ಕುಂದರ್ ಮೃತಪಟ್ಟಿದ್ದರು ಎಂದು ಪ್ರಕರಣ ದಾಖಲಾಗಿತ್ತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.