ವಿವಾದಾತ್ಮಕ ಪಠ್ಯಕ್ರಮ ಕುರಿತು ಶಿಕ್ಷಣ ಸಚಿವರ ಸ್ಪಷ್ಟನೆ ಯಾವುದೇ ಕಾರಣಕ್ಕೂ ಹಿಂದೆ ಪಡೆಯೊದಿಲ್ಲ ವೆಂದರು ಸಚಿವರು…..

Suddi Sante Desk

ತುಮಕೂರು

ಯಾರೇ ವಿರೋಧ ಮಾಡಿದರೂ SSLC ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿರುವ ಕೇಶವ ಬಲಿರಾಮ್‌ ಹೆಡಗೇವಾರ್ ಭಾಷಣ ಹಿಂಪಡೆಯುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು. ತುಮ ಕೂರಿನಲ್ಲಿ ಮಾತನಾಡಿದ ಅವರು ಅವರು ಹೆಡಗೇವಾರ್ ಕೋಟ್ಯಂತರ ಯುವಕರಿಗೆ ಪ್ರೇರಣೆಯಾಗಿದ್ದರು.ವೈಯಕ್ತಿಕ ಜೀವನಕ್ಕಿಂತ ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರು. ಸ್ವಾತಂತ್ರ್ಯಕ್ಕಾಗಿ ಅವರು ಹೋರಾಟ ಮಾಡಿದರು. ಜೈಲಿಗೂ ಹೋಗಿದ್ದರು.ಅಂದಿನ ಜಾತಿ, ಅಸ್ಪೃಶ್ಯತೆಯಂ ತಹ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಹುಡುಕಿದ್ದರು ಎಂದರು.

ಇನ್ನೂ ಆರ್‌ಎಸ್‌ಎಸ್‌ ನಂತಹ ಒಂದು ದೊಡ್ಡ ಸಂಘಟನೆ ಯನ್ನು ಹೆಡಗೇವಾರ್ ಕಟ್ಟಿದರು.ಅವರ ಒಂದು ಭಾಷಣ ವಿರೋಧಿಸುತ್ತಾರೆ ಎಂದರೆ ಇವರು ಎಂತಹ ಸಂಕುಚಿತ ಮನಸ್ಸಿನವರು ಎಂಬುದು ಅರ್ಥವಾಗುತ್ತದೆ.ಪಠ್ಯದಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ವಿರೋಧಿಸಲಿ.ಅದನ್ನು ನಾನು ಸ್ವಾಗತಿಸುತ್ತೇನೆ.ಹೆಡಗೇವಾರ್ ವಿಚಾರವನ್ನು ಎಲ್ಲರೂ ತಿಳಿದುಕೊಂಡರೆ ಕಮ್ಯೂನಿಸ್ಟ್ ವಿಚಾರಗಳು ದೇಶದಿಂದ ಎಲ್ಲಿಗೆ ಹೋಗುತ್ತವೊ ಎನ್ನುವ ಭಯ ಹೆದರಿಕೆ ಕೆಲವರಲ್ಲಿ ಶುರುವಾಗಿದೆ ಎಂದರು.‌

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.