ಮುಂದಿನ ವಾರ SSLC ಫಲಿತಾಂಶ ಸರಳವಾಗಿ ಮುಗಿದಿದೆ ಮೌಲ್ಯಮಾಪನ ಕಾರ್ಯ…..

Suddi Sante Desk

ಬೆಂಗಳೂರು –

ವಿದ್ಯಾರ್ಥಿಗಳ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಬಹು ಮುಖ್ಯವಾದ ಹಂತ. ಈಗಗಾಲೇ ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಶೀಘ್ರವೇ ಫಲಿತಾಂಶ ಪ್ರಕಟವಾಗಲಿದೆ.SSLC ವಿದ್ಯಾರ್ಥಿ ಗಳ ಮೌಲ್ಯಮಾಪನ ಮುಕ್ತಾಯವಾಗಿದ್ದು ಫಲಿತಾಂಶ ಪ್ರಕಟಣೆಗೆ ದಿನಗಣನೇ ಪ್ರಾರಂಭವಾಗಿದೆ.SSLC ಪರೀಕ್ಷೆ ಯನ್ನು ಬರೆದ ವಿದ್ಯಾರ್ಥಿಗಳು ಬೇಸಿಗೆಯ ರಜೆಯನ್ನು ಅನುಭವಿಸುತ್ತಿದ್ದಾರೆ. ಈ ನಡುವೆ SSLC ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಮೌಲ್ಯ ಮಾಪನ ಸಂಪೂರ್ಣವಾಗಿ ಮುಗಿದಿದೆ.

ಶಿಕ್ಷಕರು ಈಗಾಗಲೇ ವಿದ್ಯಾರ್ಥಿಗಳ ಅಂಕವನ್ನು ನಮೂದಿ ಸಿದ್ದಾರೆ. ಉತ್ತರ ಪತ್ರಿಕೆಯಲ್ಲಿ ನಮೂದಾಗಿರುವ ಅಂಕಗ ಳನ್ನು ರಿಜಿಸ್ಟರ್ ನಂಬರ್ ಸಹಿತ ಬೇರೊಂದು ಶೀಟ್ ನಲ್ಲಿ ಅಂಕಗಳನ್ನು ನಮೂದು ಮಾಡಲಾಗಿರುತ್ತದೆ.ಆ ಬಳಿಕ ಡಿಜಿಟಲ್ ಎಂಟ್ರಿಯೂ ಆಗಿರೋದರಿಂದ ಫಲಿತಾಂಶವನ್ನು ನೀಡುವುದ ತಡವಾಗುವುದಿಲ್ಲ.ಮೇ 12 ರಂದು ಫಲಿತಾಂ ಶವನ್ನು ನೀಡಲು ಎಸ್‌ಎಸ್‌ಎಲ್‌ಸಿ ಬೋರ್ಡ್ ಸಂಪೂ ರ್ಣವಾಗಿ ಸಜ್ಜಾಗುತ್ತಿದೆ.ಈ ಬಾರಿ ಪರೀಕ್ಷೆಯನ್ನು 8,73,846 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ನೊಂದಣಿಯನ್ನು ಮಾಡಿಕೊಂಡಿದ್ದರು.ಇದರಲ್ಲಿ ಬಹುತೇ ಕರು ಪರೀಕ್ಷೆಗೆ ಹಾಜರಾಗಿದ್ದರೂ ಬೆರಳೆಣಿಕೆಯ ವಿದ್ಯಾರ್ಥಿ ಗಳಷ್ಟೇ ಗೈರು ಹಾಜರಾಗಿದ್ದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯ ಆರಂಭದಿಂದಲೂ ಶಿಕ್ಷಣ ಸಚಿವ ಬಿಸಿ ನಾಗೇಶ್ ವಿದ್ಯಾರ್ಥಿಗಳಿಗೆ ಧೈರ್ಯವನ್ನು ತುಂಬುತ್ತಿದ್ದಾರೆ. ಮಕ್ಕಳಿಗೆ ಪರೀಕ್ಷೆಯ ಭಯ ಇರಬಾರದು ಮತ್ತು ಕೋವಿಡ್ ಕಾರಣ ದಿಂದಾಗಿ ಕೆಲವು ಶಾಲೆೆಗಳಲ್ಲಿ ಸರಿಯಾಗಿ ಪಠ್ಯವನ್ನು ಬೋಧನೆ ಮಾಡಿರಲಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಮಕ್ಕಳ ಆತಂಕವನ್ನು ದೂರ ಮಾಡಲು ಸರಳವಾದ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು ಸುಲಭವಾದ ಪ್ರಶ್ನೆ ಪತ್ರಿಕೆಯಾದ್ದರಿಂದ ಸಂತಸಗೊಂ ಡಿದ್ದರು.ಇನ್ನು ಮೌಲ್ಯ ಮಾಪನದ ವೇಳೆಯು ಶಿಕ್ಷಕರು ಕಠಿಣ ದೋರಣೆ ತೋರದೆ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮೌಲ್ಯಮಾಪನ ಕಾರ್ಯವನ್ನು ಮುಗಿಸಿದ್ದಾರೆ.ಇನ್ನು ಕರ್ನಾಟಕ ಸೆಕೆಂಡರಿ ಎಜುಕೇಷನ್ ಬೋರ್ಡ್ (KSEEB) ವೆಬ್ ನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟವಾಗಲಿದೆ. ಮೊದಲು ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ರವರು ಫಲಿತಾಂಶವನ್ನು ಘೋಷಣೆ ಮಾಡಲಿದ್ದಾರೆ. ಎಷ್ಟು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. ಡಿಸ್ಟಿಂಕ್ಷನ್,ಪ್ರಥಮ ಶ್ರೇಣಿ, ದ್ವಿತೀಯ ಶ್ರೇಣಿ ಪಡೆದವರರು ಎಷ್ಟು ವಿದ್ಯಾರ್ಥಿಗಳು ಪಡೆದಿದ್ದಾರೆ. ಯಾವ ಯಾವ ಜಿಲ್ಲೆ ಪ್ರಥಮ ಎಂಬದನ್ನೆಲ್ಲಾ ಫಲಿತಾಂಶದ ವೇಳೆ ಶಿಕ್ಷಣ ಸಚಿವರು ವಿವರಿಸಲಿದ್ದಾರೆ. ಬಳಿಕ ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲಿದೆ.ವಿದ್ಯಾರ್ಥಿಗಳು KSEEB ವೆಬ್ ಸೈಟ್ ನಲ್ಲಿ sslc result ಅನ್ನು ಆಯ್ಕೆಮಾಡಬೇಕು.ಆ ಬಳಿಕ ನಿಮ್ಮ ನೊಂದಣಿ ಸಂಖ್ಯೆ (ರಿಜಿಸ್ಟರ್ ನಂಬರ್) ಅನ್ನು ನಮೂದಿಸಬೇಕು. ವಿದ್ಯಾರ್ಥಿಯ ಪ್ರವೇಶ ಪತ್ರ (Hall ticket) ನಮೂದಾಗಿರುವ ಜನ್ಮದಿನಾಂಕವನ್ನು ಎಂಟ್ರಿ ಮಾಡಬೇಕು. ಆ ಬಳಿಕ View Your Result ಎಂಬು ದರ ಮೇಲೆ ಕ್ಲಿಕ್ ಮಾಡಿದ್ರೆ ಫಲಿತಾಂಶ ಕಾಣಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.