ಶಾಲೆಗಳು ಆರಂಭಗೊಂಡರು ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರ ಹಿಂದೇಟು – ಭಾರಿ ಬಿಸಿಲಿನ ತಾಪಮಾನ ಪರಿಸ್ಥಿತಿ ಅರ್ಥಮಾಡಿಕೊಳ್ಳದ ಸಚಿವರು…..

Suddi Sante Desk

ಬೆಂಗಳೂರು –

ಇನ್ನು ಕೆಲ ಜಿಲ್ಲೆಗಳಲ್ಲಿ ಭಾರಿ ಬಿಸಿಲು ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿ ದ್ದಾರೆ. ತೀವ್ರ ತಾಪಮಾನ ಏರಿಕೆ ಹಾಗೂ ಬಿಸಿಲಿನ ಕಾರಣಕ್ಕೆ ಇನ್ನು ಎರಡು ವಾರಗಳ ಬಳಿಕ ಶಾಲೆ ಆರಂಭಿ ಸುವಂತೆ ಕೋರಿ ಕೆಲವು ಸಚಿವರು,ಪರಿಷತ್ ಸದಸ್ಯರು ಹಾಗೂ ಪೋಷಕರು ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.ಆದರೆ ಇದ್ಯಾವುದಕ್ಕೂ ತಲೆಯನ್ನು ಕೇಡಿಸಿಕೊಳ್ಳದ ಸಚಿವರು ಮೇ 16ರಿಂದ ಶಾಲೆ ಆರಂಭ ಮಾಡುವ ಬಗ್ಗೆ ಹೇಳಿದ್ದಾರೆ‌.ಇತ್ತ ಶಿಕ್ಷಣ ಇಲಾಖೆ ಈಗಾ ಗಲೇ ತಿಳಿಸಿದೆ.

ಆದರೆ ಕೊರೊನಾ ಕಾರಣದಿಂದ ಮಕ್ಕಳ ಕಲಿಕೆ ಹಿನ್ನಡೆ ಯಾಗಿರುವ ಕಾರಣ ಎರಡು ವಾರಗಳ ಬೇಸಿಗೆ ರಜೆ ಕಡಿತ ಮಾಡಿ ಮೇ 16ರಿಂದಲೇ ಶಾಲೆಗಳ ಆರಂಭಕ್ಕೆ ಮುಂದಾ ಗಿದೆ.ಆದರೆ ಶಾಲೆಗಳ ಆರಂಭ ಮೂಂದೂಡಿಕೆಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದ್ದು ಇದರ ನಡುವೆ ಸಧ್ಯ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಇದ್ದು ಹೀಗಾಗಿ ರಾಜ್ಯದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.