ನವದೆಹಲಿ –
ಮಹಾಮಾರಿ ಕರೋನ ನಡುವೆ ಸುಪ್ರೀಂ ಕೋರ್ಟ್ ದೇಶದ ಶಾಲಾ ಮಕ್ಕಳ ಪೋಷಕರಿಗೆ ಸಿಹಿ ಸುದ್ದಿ ಯೊಂದನ್ನು ನೀಡಿದೆ.ಹೌದು ಆನ್ ಲೈನ್ ತರಗತಿ ಗಳನ್ನ ಹೊರತುಪಡಿಸಿ ಕ್ಯಾಂಪಸ್ ಹಾಗೂ ಇನ್ಯಾ ವುದೇ ಸೇವೆಗಳೂ ಬಳಕೆಯಾಗದ ಕಾರಣ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಹೌದು ನ್ಯಾಯಮೂರ್ತಿ ಎ. ಎಂ. ಖಾನ್ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರ ನೇತೃತ್ವದಲ್ಲಿನ ಪೀಠ ಈ ಒಂದು ಕುರಿತು ವಿಚಾರಣೆ ಮಾಡಿ ಕೊರೊ ನಾ ಕಾರಣದಿಂದಾಗಿ ದೇಶದ ಜನತೆ ಅನುಭವಿಸುತ್ತಿ ರುವ ಆರ್ಥಿಕ ಸಂಕಷ್ಟವನ್ನೂ ಶಾಲಾ ಆಡಳಿತ ಮಂಡಳಿ ಗಮನದಲ್ಲಿಡಬೇಕೆಂದು ಹೇಳಿದೆ.
ಇದರಿಂದಾಗಿ ಶಾಲೆಗಳಲ್ಲಿ ಪೆಟ್ರೋಲ್ / ಡಿಸೇಲ್ ವೆಚ್ಚ, ಕರೆಂಟ್ ಬಿಲ್, ಮೆಂಟೇನೆನ್ಸ್ ವೆಚ್ಚ, ನೀರಿನ ವೆಚ್ಚ ಇವೆಲ್ಲದರಲ್ಲೂ ಶಿಕ್ಷಣ ಸಂಸ್ಥೆಗಳು ಉಳಿತಾ ಯ ಮಾಡಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ವಿದ್ಯಾರ್ಥಿಗಳಿಗೆ ಶಾಲೆಗಳಿಂದ ನೀಡಲಾಗದ ಸೌಲ ಭ್ಯಗಳಿಗೂ ಶುಲ್ಕ ಕೇಳಿದರೆ ಅದು ಲಾಭದಾಯಕ ಎನಿಸಿಕೊಳ್ಳುತ್ತೆ ಎಂದು ಕೋರ್ಟ್ ಹೇಳಿದೆ.
ಶಾಲೆಯಲ್ಲಿ ನಡೆಸಲಾಗುವ ಚಟುವಟಿಕೆ ಹಾಗೂ ಶಾಲೆಗಳಲ್ಲಿ ಇರುವ ಸೌಲಭ್ಯಕ್ಕೆ ಸಂಬಂಧಿಸಿ ಶುಲ್ಕ ವನ್ನ ವಸೂಲಿ ಮಾಡಬೇಕು ಎಂಬ ಕಾನೂನಿಲ್ಲ. ಕೊರೊನಾದಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಈ ಯಾವ ಸೌಲಭ್ಯಗಳನ್ನೂ ನೀಡಲಾಗಿಲ್ಲ ಇಂತಹ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳು ಲಾಭದ ಹಿಂದೆ ಹೋಗುವುದು ಸರಿಯಲ್ಲ ಎಂದು ಹೇಳಿದೆ.2020 -21ನೇ ಸಾಲಿನಲ್ಲಿ ಲಾಕ್ ಡೌನ್ ಹಾಗೂ ಕೊರೊನಾ ವೈರಸ್ ಕಾರಣದಿಂದಾಗಿ ಶಾಲೆಗಳು ಸಂಪೂರ್ಣ ವಾಗಿ ಬಂದ್ ಆಗಿದ್ದನ್ನು ನ್ಯಾಯಮೂರ್ತಿಗಳು ಹೇಳಿದರು ಒಟ್ಟಾರೆ ಏನೇ ಆಗಲಿ ಶಾಲಾ ಫೀ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಪೊಷಕರಿಗೆ ಸಿಹಿ ಸುದ್ದಿ ನೀಡಿದೆ