ಚಾಮರಾಜನಗರ –
ಆಕ್ಸಿಜನ್ ದುರಂತ ಪ್ರಕರಣದಲ್ಲಿ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ದಾಖಲೆಗಳನ್ನು ಸೀಜ್ ಮಾಡಲು ಸಮಯದಲ್ಲಿ DHO ರೊಬ್ಬರು ಕುಸಿದು ಬಿದ್ದ ಘಟನೆ ಚಾಮರಾಜನಗರ ನಗರದಲ್ಲಿ ನಡೆದಿದೆ ಹೌದು ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ದಾಖಲೆಗಳನ್ನು ಸೀಜ್ ಮಾಡಲು ಆದೇಶ ನೀಡಿತ್ತು, ಅಂತೆಯೇ ಅಧಿಕಾರಿಗಳು ದಾಖಲೆಗಳನ್ನು ಸೀಜ್ ಮಾಡುತ್ತಿದ್ದ ವೇಳೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಎಂ ಸಿ ರವಿ ಸ್ಥಳದಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ
ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗಳ ಕಚೇರಿ ಜಿಲ್ಲಾಸ್ಪತ್ರೆ DHO ಕಚೇರಿ ಸೇರಿದಂತೆ ಐದು ಸ್ಥಳದಲ್ಲಿ DYSP ಪ್ರಿಯದರ್ಶಿನಿ ಸಾಣಿಕೊಪ್ಪ ಮತ್ತು ತಂಡ ದಾಳಿ ನಡೆಸಿತ್ತು. ಈ ವೇಳೆ DHO ಕಚೇರಿ ದಾಖಲೆಗಳ ಸೀಜ್ ಗೆ ತೆರಳಿದ ಸಂದರ್ಭ ದಲ್ಲಿ DHO ಡಾ ಎಂ ಸಿ ರವಿ ಸ್ಥಳದಲ್ಲೇ ಕುಸಿದು ಬಿದ್ದರು ಕೂಡಲೇ ಅವರಿಗೆ ಕಚೇರಿಯಲ್ಲೇ ಚಿಕಿತ್ಸೆ ನೀಡಲಾಯಿತು
ನಂತರ ಎಲ್ಲವೂ ಸರಿಯಾದ ನಂತರ ಪೊಲೀಸರು ದಾಖಲೆಗಳನ್ನು ಸೀಜ್ ಮಾಡಿಕೊಂಡು ಸ್ಥಳದಿಂದ ತೆರಳಿದರು ಇನ್ನೂ ಚಾಮರಾಜನಗರ ಘಟನೆ ಕುರಿ ತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆ ಸಿದ ನ್ಯಾಯಾಲಯ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು ಹಾಗೂ ದಾಖಲೆಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು ಈ ಒಂದು ಹಿನ್ನೆಲೆಯಲ್ಲಿ ದಾಖಲೆ ಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ