ಕಿತ್ತು ತಿನ್ನುವ ಬಡತನದ ನಡುವೆ ಸರ್ಕಾರಿ ಶಾಲೆಯಲ್ಲಿ ಓದಿ ಟಾಫರ್ ಕೂಲಿ ಮಾಡುತ್ತಾ ವಲಸೆ ಕಾರ್ಮಿಕರ ಮಗ SSLC ಯಲ್ಲಿ ಶಾಲೆಗೆ ಪ್ರಥಮ…..

Suddi Sante Desk

ಉಡುಪಿ –

ಹೌದು ಉಡುಪಿ ಯ ಮಲ್ಪೆ ಬಂದರಿನಲ್ಲಿ ಮೀನು ಬುಟ್ಟಿ ಗಳನ್ನು ಹೊತ್ತು ಕೂಲಿ ಮಾಡಿ ಬದುಕು ನಡೆಸುತ್ತಿದ್ದ ಕೊಪ್ಪಳ ಮೂಲದ ವಲಸೆ ಕಾರ್ಮಿಕರ ಮಗ ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ SSLC ಯಲ್ಲಿ ವಿದ್ಯಾರ್ಥಿ ಪುನೀತ್ ನಾಯ್ಕ್, ಟಾಪರ್ ಆಗಿದ್ದಾನೆ

ಕೊಪ್ಪಳ ಜಿಲ್ಲೆಯ ಕಲ್ಲಪ್ಪ ಹಾಗೂ ಲಲಿತಾ ಅವರು 10 ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಉಡುಪಿಗೆ ಬಂದಿದ್ದು ಬಳಿಕ ಕಲ್ಲಪ್ಪ,ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ತ್ಯಜಿಸಿ ಹೋಗಿದ್ದರು.ಬಳಿಕ ಮಕ್ಕಳ ಸಾಕುವ ಜವಾಬ್ದಾರಿ ಹೊತ್ತುಕೊಂಡ ಲಲಿತಾ,ಬೆಳಗಿನ ಜಾವ ಮಲ್ಪೆ ಬಂದರಿಗೆ ತೆರಳಿ ಮೀನು ಬುಟ್ಟಿ ಹೊತ್ತು ಕೂಲಿ ಮಾಡಿದರು.ಈ ರೀತಿ ಶ್ರಮ ವಹಿಸಿ ತನ್ನ ಮಕ್ಕಳಿಗೆ ಶಿಕ್ಷಣ ನೀಡಿದರು.

ಕಲ್ಮಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂ ಡಿದ್ದ ಇವರದ್ದು ಕಷ್ಟದ ಬದುಕು.ಲಲಿತಾ ತನ್ನ ಹೆಣ್ಣು ಮಕ್ಕಳಾದ ಹೇಮಾ ಮತ್ತು ಪ್ರೇಮಾ ಅವರನ್ನು ಮದುವೆ ಮಾಡಿಸಿಕೊಟ್ಟರೆ ಗಂಡು ಮಕ್ಕಳಾದ ಕಿರಣ್ ನಾಯ್ಕ್ ಹಾಗೂ ಪುನೀತ್ ನಾಯ್ಕ್‌ಗೆ ಉತ್ತಮ ಶಿಕ್ಷಣ ನೀಡಿದರು.

ಕೊರೋನ ಸಂದರ್ಭದಲ್ಲಿ ಬದುಕು ತತ್ತರಿಸಿದಾಗ ಕಿರಣ್ ಮತ್ತು ಪುನೀತ್ ತನ್ನ ತಾಯಿ ಕೆಲಸದಲ್ಲಿ ಜೊತೆಯಾದರು. ಬೆಳಗಿನ ಜಾವ ನಾಲ್ಕು ಗಂಟೆಗೆ ಮಲ್ಪೆ ಬಂದರಿಗೆ ಹೋಗಿ ಮೀನು ಹೊತ್ತು ಬದುಕು ನಡೆಸಲು ಹೆಗಲುಕೊಟ್ಟರು. ಇದರ ಮಧ್ಯೆಯೇ ಪುನೀತ್ ನಾಯ್ಕ್ ಶ್ರಮ ವಹಿಸಿ ಓದಿ, ರಾಜ್ಯಕ್ಕೆ SSLC ಟಾಪರ್ ಆಗಿ ಮಹತ್ತರ ಸಾಧನೆ ಮಾಡಿ ದರು.ಪುನೀತ್ ಸಹೋದರ ಕಿರಣ್ ಕೂಡ ಈ ಹಿಂದೆ ಇದೇ ಶಾಲೆಯಲ್ಲಿ ಕಲಿತು ಉತ್ತಮ ಅಂಕ ಪಡೆದಿದ್ದಾರೆ.ಈ ಪ್ರೌಢ ಶಾಲೆಗೆ ನಾಲ್ಕು ಶಿಕ್ಷಕರ ಕೊರತೆ ಇತ್ತು.ಪರೀಕ್ಷೆಗೆ ಎರಡು ತಿಂಗಳು ಇರುವಾಗ ಎರಡು ಶಿಕ್ಷಕರನ್ನು ನೇಮಿಸಲಾಗಿತ್ತು. ಆದರೂ ಪುನೀತ್ ಈ ಎಲ್ಲ ಕೊರತೆಗಳ ಮಧ್ಯೆಯೂ ಯಾವುದೇ ಟ್ಯೂಶನ್ ಪಡೆಯದೆ ಮಹತ್ತರ ಸಾಧನೆ ಮಾಡಿದ್ದಾರೆ.

75 ವರ್ಷಗಳನ್ನು ಪೂರೈಸಿರುವ ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಇತಿಹಾಸದಲ್ಲೇ ಈ ರೀತಿ 625 ರಲ್ಲಿ 625 ಅಂಕ ಪಡೆದಿರುವುದು ಇದೇ ಪ್ರಥಮ.ಇದರಿಂದ ಶಾಲೆಯಲ್ಲಿ ಸಂಭ್ರಮದ ವಾತಾವರಣ ಕಂಡುಬಂತು.ಸಾಧನೆ ಮಾಡಿದ ಪುನೀತ್‌ಗೆ ಶಿಕ್ಷಕರು ಅಭಿನಂದನೆ ಸಲ್ಲಿಸಿದರು.ಸಹಪಾಠಿಗಳು ಸಾಧಕನನ್ನು ಮೇಲಕ್ಕೆ ಎತ್ತಿ ಸಂಭ್ರಮಿಸಿದರು.ಶಿಕ್ಷಕರು ಪುನೀತ್‌ಗೆ ಸಿಹಿತಿಂಡಿ ತಿನಿಸಿ ಬಳಿಕ ಎಲ್ಲರಿಗೂ ಹಂಚಿದರು.

ದೂರದ ಕೊಪ್ಪಳದಿಂದ ಬಂದು ಕಷ್ಟದ ಬದುಕು ನಡೆಸಿದ ಪುನೀತ್,ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಬಂದರಿನಲ್ಲಿ ಕೆಲಸ ಮಾಡುತ್ತಿದ್ದನು.ನಂತರ ಶಾಲೆಗೆ ಬಂದು ಶ್ರದ್ಧೆಯಿಂದ ಓದುತ್ತಿದ್ದನು.ಒಂದು ದಿನವೂ ಗೈರು ಹಾಜರಾಗದೆ ಪ್ರತಿ ದಿನ ಶಾಲೆಗೆ ಬರುತ್ತಿದ್ದನು.ಯಾವುದೇ ಸಂಶಯಗಳಿದ್ದರೆ ಶಿಕ್ಷಕರ ಬಳಿ ಕೇಳಿ ಪರಿಹರಿಸಿ ಕೊಳ್ಳುತ್ತಿದ್ದನು.ಈ ರೀತಿ ಸಾಧನೆ ಮಾಡಿದ ಪುನೀತ್‌ನನ್ನು ನಮ್ಮ ವಿದ್ಯಾರ್ಥಿ ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಪ್ರಭು ತಿಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.