ಎರಡು ದಿನಗಳಲ್ಲಿ ಶಿಕ್ಷಕರ ನೇಮ ಕಾತಿಯ CET ಪರೀಕ್ಷೆಯ ಕೀ ಉತ್ತರ ಗಳು ಬಿಡುಗಡೆ – ಇಲಾಖೆ ಯಿಂದ ಅಧಿಕೃತವಾಗಿ ಬಿಡುಗಡೆ ಯಾಗಲಿವೆ ಉತ್ತರಗಳು…..

Suddi Sante Desk

ಬೆಂಗಳೂರು –

ಶಿಕ್ಷಕ ನೇಮಕಾತಿಯ ಸಿಇಟಿ ಪರೀಕ್ಷೆಗಳು ಮುಗಿದಿದೆ. ಶಿಕ್ಷಣ ಇಲಾಖೆ ಎರಡು ಮೂರು ದಿನಗಳಲ್ಲಿ ಕೀ ಉತ್ತರ ವನ್ನು ಬಿಡುಗಡೆ ಮಾಡಲಿದೆ.15,000 ಶಿಕ್ಷಕರು ಅಧಿಕೃತ ವಾಗಿ ಕೀ ಉತ್ತರಗಳು ಪ್ರಕಟವಾದ ನಂತರ ತಮ್ಮ ಓಎಂಆರ್ ಕಾಪಿಗಳನ್ನು ಪರಿಶೀಲಿಸಿಕೊಂಡು ತಾವೂ ಸರ್ಕಾರಿ ಶಿಕ್ಷಕರಾಗಬಹುದೇ ಎಂಬುದನ್ನು ತಾಳೆಹಾಕಬ ಹುದು.ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ 21 ಮತ್ತು ಮೇ 22 ನಡೆದಿದ್ದು ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಅಭ್ಯರ್ಥಿಗಳು ಬರೆದಿದ್ದಾರೆ.

ಕರ್ನಾಟಕ ಶಿಕ್ಷಕರ ನೇಮಕಾತಿ ಹುದ್ದೆ 2022ರ ಪರೀಕ್ಷೆಗೆ 1,06,083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು.ಈ ಪೈಕಿ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿ ಯನ್ನು ಸಲ್ಲಿದ್ದವರು 31,967 ಅಭ್ಯರ್ಥಿಗಳು.ಶಿಕ್ಷಕ ಹುದ್ದೆಗೆ ಅರ್ಜಿಗಳ ಪರಿಗಣನೆ ಆಗಿರುವುದು 74,116 ಮಂದಿ ಅಭ್ಯರ್ಥಿಗಳದ್ದು ಪರೀಕ್ಷೆಗೆ ಹಾಜರಾದವರ ಸಂಖ್ಯೆ 69,159 ಅಭ್ಯರ್ಥಿಗಳು.ಪರೀಕ್ಷೆಗೆ ಗೈರು ಹಾಜರಾದವರು 4957 ಅಭ್ಯರ್ಥಿಗಳು ಅಂದರೆ 93% ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೇ 7% ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಎರಡನೇ ಪತ್ರಿಕೆಯನ್ನು ಬರೆಯು ವಾಗಲು ಕೆಲ ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.ಶಿಕ್ಷಣ ಇಲಾಖೆ ಸಿಇಟಿಯ ಕೀ ಉತ್ತರ ಬಿಡುಗಡೆಗೊಳಿಸಿದ ಬಳಿಕ ಉತ್ತರವನ್ನು ತಾಳೆಹಾಕಿ ಗಳಿಸಿದ ಅಂಕದ ಶೇ 50 ಅನ್ನು ಪರಿಗಣಿಸಿ ಟಿಇಟಿ,ಪದವಿ, ಶಿಕ್ಷಕರ ಕೋರ್ಸ್ ನಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ಲೆಕ್ಕಹಾಕಬೇಕು.ಆ ನಂತರವೇ ಶಿಕ್ಷಣ ಇಲಾಖೆ ಕಟ್ ಆಫ್ ಶೇಕಡವಾರು ಮತ್ತು ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡುವ ವೇಳೆ ಸಾಮಾನ್ಯ ವರ್ಗ,ಪರಿಶಿಷ್ಟ ಜಾತಿ,ಪಂಗಡ,ವರ್ಗ,ಒಬಿಸಿಗಳಿಗೆ ಅನುಗುಣವಾಗಿ ಆಯ್ಕೆ ಪಟ್ಟಿ ಬಿಡುಗಡೆಯಾಗಲಿದೆ.ಇನ್ನು ಕೀ ಉತ್ತರವನ್ನು https://www.schooleducation.kar.nic.in ನಲ್ಲಿ ಲಭ್ಯವಾಗಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.