ಮಂಗಳೂರು –
ಸಧ್ಯ ದೇಶದಾದ್ಯಂತ ಕೊವಿಡ್ ಅಲೆ ಜೋರಾಗಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಸಾವಿ ನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಇದನ್ನು ಹತೋಟಿಗೆ ತರಲು ರಾಜ್ಯ ಸರ್ಕಾ ರ ಲಾಕ್ ಡೌನ್ ಘೋಷಣೆ ಮಾಡಿದೆ.ಹೀಗಾಗಿ ರಸ್ತೆ ಗಳು ಸಂಪೂರ್ಣವಾಗಿ ಖಾಲಿಯಾಗಿದೆ ಆದರೆ ಇದ ನ್ನೇ ಬಂಡವಾಳ ಮಾಡಿಕೊಂಡ ಕೆಲವು ವಾಹನ ಸವಾರರು ಅತಿ ವೇಗವಾಗಿ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದಾರೆ.ಹೌದು ಇದಕ್ಕೇ ಸಾಕ್ಷಿಯಾಗಿ ನಮ್ಮ ಮುಂದೆ ಕಂಡು ಬಂದಿದ್ದು ದಕ್ಷಿಣ ಕನ್ನಡದಲ್ಲಿ
ಅತಿ ವೇಗದ ವಾಹನ ಸಂಚಾರ ಪ್ರಾಣಕ್ಕೆ ಸಂಚಕಾರ ಎನ್ನದೇ ಹೇಗೆ ಚಲಾಯಿಸುತ್ತಾರೆ ಎಂಬುದಕ್ಕೆ ಈ ಅಪಘಾತವೇ ಸಾಕ್ಷಿಯಾಗಿದೆ ಅಲ್ಲದೆ ಸಂಭವಿಸಿದ ರಸ್ತೆ ಅಪಘಾತವೇ ಸಾಕ್ಷಿಯಾಗಿದ್ದು ಜನರಲ್ಲಿ ನಡುಕ ಹುಟ್ಟಿಸಿದೆ
ಹೌದು ಎರಡು ಬೈಕ್ ಗಳ ನಡುವೆ ಅಪಘಾತವಾ ಗಿದ್ದು ಬೈಕ್ ಸವಾರ 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಘಟನೆ ಮಂಗಳೂರಿನ ಪದವಿನಂಗಡಿ ಬಳಿ ನಡೆ ದಿದೆ. ಖಾಲಿ ಇದ್ದ ರಸ್ತೆಯಲ್ಲಿ ವೇಗವಾಗಿ ಸಂಚರಿಸು ತ್ತಿದ್ದ ಬೈಕ್ ಪಕ್ಕದ ಅಂಗಡಿಗೆ ಗುದ್ದಿದ್ದು ಅಪಘಾತದ ತೀವ್ರತೆಗೆ ಬೈಕ್ ನಲ್ಲಿದ್ದ ಸವಾರ ಹಾರಿ ರಸ್ತೆಗೆ ಅಪ್ಪಳಿಸಿದ್ದಾರೆ.
ವೇಗವಾಗಿ ಬರುತ್ತಿದ್ದ ಬೈಕ್ ಗೆ ಸ್ಕೂಟಿ ಯೊಂದು ಅಡ್ಡ ಬಂದಿದೆ ಇದನ್ನು ತಪ್ಪಿಸಲು ಹೊರಟ ಬೈಕ್ ಸವಾರ ಅಂಗಡಿಗೆ ಗುದ್ದಿದ್ದಾರೆ. ಇನ್ನು ಹಿಂದೆ ಬರುತ್ತಿ ದ್ದ ಸವಾರ ಕೂಡ ಬೈಕ್ ಗೆ ತಗುಲಿ ರಸ್ತೆಗೆ ಬಿದ್ದಿದ್ದಾ ರೆ.ಒಟ್ಟಾರೆ ಒಂದು ಅಪಘಾತದಿಂದ ಎರಡು ಬೈಕ್ ಅಪಘಾತಕ್ಕೀಡಾಗಿವೆ.
ಬೈಕ್ ಸವಾರನನ್ನು ಬೊಂದೇಲ್ ನಿವಾಸಿ ಪ್ರಶಾಂತ್ (30) ಎಂದು ಗುರುತಿಸಲಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಪ್ರಶಾಂತ್ ಮೃತಪಟ್ಟಿದ್ದಾರೆ. ಈ ಸಂಬಂಧ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಂದು ಬೆಳಗ್ಗೆ ನಡೆದ ಈ ಅಪಘಾತದ ವಿಡಿಯೋ ಸದ್ಯ ವೈರಲ್ ಆಗಿದೆ