ಫಲಿತಾಂಶ ದ ಪ್ರತಿಷ್ಠೆ ಗೆ ಬಿದ್ದು ಹಾಳಾದರೂ ಶಿಕ್ಷಕರು ಶಾಲೆ ಯವರು – ಮಾಡಬಾರದ ಕೆಲಸ ಮಾಡಿ ಸಾಮೂಹಿಕವಾಗಿ ಜೈಲು ಸೇರಿದರು…..

Suddi Sante Desk

ರಾಮನಗರ –

ಉತ್ತಮ ಫಲಿತಾಂಶದ ಪ್ರತಿಷ್ಠೆಗೆ ಬಿದ್ದು ಈ ಬಾರಿಯ SSLC ಪರೀಕ್ಷೆಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ ಮಾಡಿಕೊಟ್ಟಿರುವ ಸಂಗತಿ ಪೊಲೀಸ್‌ ತನಿಖೆ ವೇಳೆ ಬಹಿರಂಗಗೊಂಡಿದೆ.ಪರೀಕ್ಷಾ ಅಕ್ರಮದ ಆರೋಪದ ಮೇಲೆ ಬಂಧಿತರಾಗಿರುವ ಮಾಗಡಿಯ ಒಬ್ಬ ಪ್ರಾಚಾರ್ಯ, ಕ್ಲರ್ಕ್,ಏಳು ಶಿಕ್ಷಕರನ್ನು ಪೊಲೀಸರು ವಿಚಾರಣೆಗೆ ಒಳಪಡಿ ಸಿದ್ದು,ಫಲಿತಾಂಶ ಉತ್ತಮಪಡಿಸುವ ಸಲುವಾಗಿಯೇ ಈ ಕಾರ್ಯಕ್ಕೆ ಮುಂದಾಗಿದ್ದಾಗಿ ಅವರು ಬಾಯಿಬಿಟ್ಟಿದ್ದಾರೆ.

ಪರೀಕ್ಷೆಯಲ್ಲಿ ಅಕ್ರಮವೆಸಗಿ ಹಣ ಮಾಡುವ ಉದ್ದೇಶ ದಿಂದ ಆರೋಪಿಗಳು ಈ ಕೃತ್ಯ ನಡೆಸಿರುವ ಬಗ್ಗೆ ಪೊಲೀ ಸರಿಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ.ಬೇರೆ ಜಿಲ್ಲೆಗಳಿಗೆ ಪ್ರಶ್ನೆಪತ್ರಿಕೆ ಕಳುಹಿಸಿಕೊಟ್ಟಿರುವ ಸಾಧ್ಯತೆಗಳೂ ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ದಾಖಲಾತಿ ಹೆಚ್ಚಿಸಿಕೊಳ್ಳಲು ಖಾಸಗಿ ಶಾಲೆಗಳು ಪೈಪೋಟಿಗೆ ಬಿದ್ದಿದ್ದು ಅದಕ್ಕಾಗಿ ಶೇ 100ರ ಫಲಿತಾಂಶದ ಬೆನ್ನು ಬಿದ್ದಿವೆ.ಸರ್ಕಾರಿ ಶಾಲೆಗಳಲ್ಲಿ ಸಹ ಉತ್ತಮ ಫಲಿತಾಂಶ ಬರಲೇ ಬೇಕು ಎಂದು ಅಧಿಕಾರಿಗಳ ಒತ್ತಡ ಹೆಚ್ಚಿದೆ.ಈ ಎಲ್ಲವೂ ಪರೋ ಕ್ಷವಾಗಿ ಸಾಮೂಹಿಕ ನಕಲಿಗೆ ಪ್ರಚೋದನೆ ನೀಡಿವೆ ಎನ್ನಲಾಗಿದೆ.ಸಾಮೂಹಿಕ ನಕಲು ಅಕ್ರಮ ನಡೆದಿದೆ ಎನ್ನಲಾದ ಮಾಗಡಿಯ ರಂಗನಾಥಸ್ವಾಮಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 54 ಬಾಲಕರು ಹಾಗೂ 90 ಬಾಲಕಿ ಯರೂ ಸೇರಿದಂತೆ ಒಟ್ಟು 144 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.7 ಕೊಠಡಿಗಳಲ್ಲಿ ಪರೀಕ್ಷೆಗಳು ನಡೆದಿವೆ. ಮಾಗಡಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ.ಮಾಗಡಿಯ ಇತರ ಮೂರು ಪರೀಕ್ಷಾ ಕೇಂದ್ರಗಳಲ್ಲಿನ ಸಿಬ್ಬಂದಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಜಾಲಾಡತೊಡಗಿದ್ದಾರೆ.

ಪರೀಕ್ಷೆ ಆರಂಭಗೊಂಡ ಒಂದು ಗಂಟೆ ಬಳಿಕ ವಿದ್ಯಾರ್ಥಿ ಗಳಿಗೆ ಉತ್ತರ ಹೇಳಿ ಕೊಡಲಾಗುತ್ತಿತ್ತು.ಈ ಸಂದರ್ಭ ಕೊಠಡಿ ಮೇಲ್ವಿಚಾರಕರೇ ಹೊರಗೆ ನಿಲ್ಲುತ್ತಿದ್ದರಂತೆ ಹೀಗಾಗಿ ಅಷ್ಟೂ ವಿದ್ಯಾರ್ಥಿಗಳು ಒಂದೇ ರೀತಿ ಉತ್ತರ ಬರೆದಿರುವ ಸಾಧ್ಯತೆ ಇದೆ.ಮಾಗಡಿ ಮಾತ್ರವಲ್ಲ ಇತರೆ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿಯೂ ಈ ರೀತಿ ಅಕ್ರಮ ನಡೆದಿರುವ ಸುದ್ದಿ ದಟ್ಟವಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮೌಲ್ಯಮಾಪನದ ವೇಳೆಯೂ ಇದಕ್ಕೆ ಪೂರಕ ಸಾಕ್ಷ್ಯಗಳು ದೊರೆತಿವೆ.ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಈಗಾಗಲೇ ತನಿಖಾ ತಂಡ ರಚಿಸಿದೆ.

ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಈ ಅಕ್ರಮ ದಲ್ಲಿ ಭಾಗಿ ಆಗಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಹಣ ಕ್ಕಾಗಿ ಉತ್ತರ ಹೇಳಿಕೊಟ್ಟಿರುವ ಸಾಧ್ಯತೆ ಕಡಿಮೆ ಇದೆ ಎಂಬ ವಿಚಾರ ತನಿಖೆ ಯಿಂದ ಹೊರಬಿದ್ದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.