800 ಕ್ಕೂ ಹೆಚ್ಚು ವಿದ್ಯಾರ್ಥಿ ಗಳಿಗೆ 7 ಶಿಕ್ಷಕರು ನಿವೃತ್ತಿ ಅಂಚಿನಲ್ಲಿ 2 ಶಿಕ್ಷಕರು – ಸರ್ಕಾರಿ ಶಾಲೆಯ ಡಿಮ್ಯಾಂಡ್ ನಡುವೆ ನೋಡದ ಇಲಾಖೆ ಸಚಿವರು…..

Suddi Sante Desk

ಯಡ್ರಾಮಿ –

ಹೌದು ವಿಜಯಪುರ ಜಿಲ್ಲೆಯ ಜೇವರ್ಗಿ ಪಟ್ಟಣದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ 2022-23ನೇ ಸಾಲಿಗೆ ಬರೋಬ್ಬರಿ 840ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಪಡೆಯುವ ಮೂಲಕ ಶಿಕ್ಷಣ ಇಲಾಖೆ ಹುಬ್ಬೇರುವಂತೆ ಮಾಡಿದೆ.ಸದರೆ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ.ಈ ಮೊದಲಿದ್ದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಗಳನ್ನು ತಾಲೂಕಿಗೆ ಒಂದರಂತೆ ಕರ್ನಾಟಕ ಪಬ್ಲಿಕ್‌ ಶಾಲೆಯಾಗಿ ಮೇಲ್ದರ್ಜೆಗೇರಿಸಲಾಯಿತು.ಅದರಲ್ಲಿ ಪಟ್ಟಣದ ಶಾಲೆ ಯೂ ಹೊರತಾಗಿಲ್ಲ.ಶಾಲೆಯಲ್ಲಿನ 840 ಮಕ್ಕಳಿಗೆ ಕೇವಲ 7 ಜನ ಕಾಯಂ ಶಿಕ್ಷಕರು ಮಾತ್ರ ಇದ್ದಾರೆ.ಅದರಲ್ಲಿ ಜುಲೈ 31ಕ್ಕೆ ಇಬ್ಬರು ಶಿಕ್ಷಕರು ವಯೋನಿವೃತ್ತಿ ಆಗಲಿದ್ದು ಶಾಲೆಯ ಉಳಿದ 5 ಜನ ಶಿಕ್ಷಕರು 840 ಮಕ್ಕಳಿಗೆ ಪಾಠ ಪ್ರವಚನ ಮಾಡುವ ಅನಿವಾರ್ಯತೆ ಇದೆ.ಹೀಗಾಗಿ ಎಲ್ಲಾ ವಿಷಯ ಗಳ ಬೋಧನೆಗೆ ಕಾಯಂ ಶಿಕ್ಷಕರ ನೇಮಿಸಬೇಕಾದ ತುರ್ತು ಅಗತ್ಯ ಇದೆ.

ಪಬ್ಲಿಕ್‌ ಶಾಲೆ ಆದ ನಂತರ ಮಕ್ಕಳ ದಾಖಲಾತಿ ಹೆಚ್ಚಳ ವಾಗುತ್ತಲೇ ಇದೆ.ಎಲ್‌.ಕೆ.ಜಿ, ಯು.ಕೆ.ಜಿ, 1ರಿಂದ 5ನೇ ವರೆಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ.1-8 ರವರೆಗೆ ಕನ್ನಡ ಮಾಧ್ಯಮ ಇದೆ.ನಮ್ಮಲ್ಲಿ ಕಡಿಮೆ ಇರುವ ಶಿಕ್ಷಕರೇ ಎಲ್ಲಾ 14 ತರಗತಿಗಳ ಮಕ್ಕಳಿಗೂ ಬೋಧಿಸು ತ್ತಾರೆ.ಈ ವರ್ಷಕ್ಕೆ 6ಜನ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳ ಲಾಗಿದೆ.ಹೆಚ್ಚಿನ ಶಿಕ್ಷಕರ ನೇಮಕಾತಿಯಾದರೆ ಅನುಕೂಲ ವಾಗುತ್ತದೆ.ಎಂಬ ಮಾತುಗಳನ್ನು ಶಾಲೆಯ ಮುಖ್ಯಶಿಕ್ಷಕ ಬಸವರಾಜ ಪಾಟೀಲ ಅವರು ಹೇಳಿದರು.

ಇನ್ನೂ ಇದೇ ವೇಳೆ ಬಿಇಓ ಚವ್ಹಾಣಶೆಟ್ಟಿ ಮಾತನಾಡಿ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದ್ದು ಮಕ್ಕಳ ಕಲಿಕೆಗೆ ತೊಂದರೆಯಾಗಬಾರದೆಂದು ಸರ್ಕಾರದ ಅನುಮತಿ ಮೇರೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ.ನಮ್ಮಲ್ಲಿ ಅತಿಥಿ ಶಿಕ್ಷಕರನ್ನು ಹೆಚ್ಚಾಗಿ ನೇಮಿಸಿಕೊಳ್ಳಲು ಮೇಲಧಿಕಾರಿಗಳಿಗೆ ಮನವಿ ಮಾಡಿ ದ್ದೇವೆ.ಮಕ್ಕಳ ಪಾಠ ಬೋಧನೆಗೆ ಯಾವ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.