ಯಾದಗಿರಿ –
ಕೋವಿಡ್ ಮಹಾಮಾರಿಯ ಅಟ್ಟಹಾಸ ದಿನೇದಿನೇ ಸಾಕಷ್ಟು ಶಿಕ್ಷಕರನ್ನು ಬಲಿ ಪಡೆಯುತ್ತಿದೆ. ಮುಂದು ವರೆದು ಕರೋನಾದಿಂದ ಹಲವಾರು ಶಿಕ್ಷಕರು ಬಳಲುತ್ತಿದ್ದಾರೆ,ಆಸ್ಪತ್ರೆಗಳಲ್ಲಿ ಸರಿಯಾಗಿ ಬೆಡ್ ವ್ಯವಸ್ಥೆ ಇಲ್ಲದೆ,ಐಸೋಲೇಶನ್ ಅವಧಿಯಲ್ಲಿ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿ ಸಲಾಗದೇ,ರೋಗ ಉಲ್ಬಣಗೊಂಡು ಆಕ್ಸಿಜನ್ ಸಿಗದೇ ಮೃತಪಟ್ಟಿದ್ದು ನಮಗೆ ಗೊತ್ತಿರುವ ಸಂಗತಿ ಇಂಥಹ ಪರಿಸ್ಥಿತಿಯಲ್ಲಿ ಯಾದಗಿರಿ ಜಿಲ್ಲಾ ಸಂಘ ದವರು ಮಾಡಿದ ಕೆಲಸ ನೋಡಿ

ಈ ಅಂಶಗಳನ್ನು ಮನಗಂಡು ಯಾದಗಿರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಅಳ್ಳಳ್ಳಿ ಹಾಗೂ ಅವರ ತಂಡ ಅನೇಕ ದಾನಿಗಳನ್ನು ಸಂಪರ್ಕಿಸಿ, ಜೊತೆಗೆ ಯಾದಗಿರಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿ ಗಳು,ಅಪರ ಜಿಲ್ಲಾಧಿಕಾರಿಗಳು ಹಾಗೂ ಉಪನಿ ರ್ದೇಶಕರನ್ನು ಸಂಪರ್ಕಿಸಿ 20 ಹಾಸಿಗೆಯುಳ್ಳ “ಶಿಕ್ಷಕರಿಗಾಗಿ ಮಾತ್ರ ಮೀಸಲಾಗಿಡುವ ಕೋವಿಡ್ ಕೇರ್ ಸೆಂಟರ” ವ್ಯವಸ್ಥೆಯನ್ನು “ಸರಕಾರಿ ಪ್ರೌಢಶಾ ಲೆ ಸ್ಟೇಷನ್ ಬಜಾರ ಯಾದಗಿರಿ”ಯಲ್ಲಿ ಮಾಡಲು ಸಜ್ಜಾಗಿದ್ದಾರೆ

ಹೌದು ಈ ಕೋವಿಡ್ ಕೇರ್ ಸೆಂಟರ್ ಗೆ ಅವಶ್ಯಕತೆ ಇರುವ ಔಷಧಿಗಳು,ಆಕ್ಸಿಜನ್,ಊಟದ ವ್ಯವಸ್ಥೆ, ಕುಡಿಯಲು ಬಿಸಿನೀರಿನ ವ್ಯವಸ್ಥೆಯನ್ನು ಉಚಿತ ವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)ಜಿಲ್ಲಾ ಘಟಕ ಯಾದಗಿರಿ ವತಿಯಿಂದ ವ್ಯವಸ್ಥೆ ಮಾಡುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿ ಯಾದ ಸತ್ಕಾರ್ಯವಾಗಿದೆ

ಈ ಒಂದು ಕಾರ್ಯವನ್ನು ಶಿಕ್ಷಕರು ಶಿಕ್ಷಕರಿಗಾಗಿ ಮಾಡಿದ್ದಾರೆ.ಇನ್ನೂ ಈ ಒಂದು ಕಾರ್ಯವನ್ನು ನೋಡಿ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇ ಖರ ನುಗ್ಗಲಿ ಇವರು ನಿಮ್ಮ ಈ ಕಾರ್ಯವು ಸಂಘ ದ ಘನತೆಯನ್ನು ಎತ್ತಿ ಹಿಡಿಯುವ ಸತ್ಕಾರ್ಯವಾ ಗಿದೆ ಹಾಗೂ ಇಡೀ ರಾಜ್ಯಕ್ಕೆ ಮಾದರಿಯಾಗುವ ಕಾರ್ಯವಾಗಿದೆ ಇಂತಹ ಅತ್ಯುತ್ತಮ ಕಾರ್ಯ ಮಾಡುತ್ತಿರುವ ಯಾದಗಿರಿ ಜಿಲ್ಲಾ ಸಂಘಕ್ಕೆ ರಾಜ್ಯ ಸಂಘದಿಂದ ಅನಂತಾನಂತ ಧನ್ಯವಾದಗಳು ಎಂದಿ ದ್ದಾರೆ

