ರಾಜ್ಯದ ಪ್ರಗತಿಯಲ್ಲಿ ಸರ್ಕಾರಿ ನೌಕರರ ಮಹತ್ವದ ಪಾತ್ರ ದೊಡ್ಡದಿದೆ CM – ರಾಜ್ಯ ಸರ್ಕಾರಿ ನೌಕರರ ಕಾರ್ಯ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ನಾಡದೊರೆ…..

Suddi Sante Desk

ಬೆಂಗಳೂರು –

ರಾಜ್ಯದ ಪ್ರಗತಿಯಲ್ಲಿ ಸರ್ಕಾರಿ ನೌಕರರ ಮಹತ್ವದ ಪಾತ್ರ ದೊಡ್ಡದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು –2022ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರಿ ನೌಕರರ ಕಾರ್ಯ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ನಾಡದೊರೆ.ನಾವೆಲ್ಲಾ ಒಂದೇ ಕುಟುಂಬದ ಸದಸ್ಯರಾಗಿದ್ದು ರಾಜ್ಯವನ್ನು ಉನ್ನತ ಮಟ್ಟಕ್ಕೆ ತರಲು ಒಗ್ಗಾಟ್ಟಾಗಿ ದುಡಿಯಬೇಕು.ಆಳುವವರು ಮತ್ತು ಆಡಳಿತಕ್ಕೆ ಸಂಯೋಜನಾತ್ಮಕ ಸಂಬಂಧವಾಗಿದ್ದು ಇವೆರ ಡೂ ಚಕ್ರಗಳು ರಾಜ್ಯದ ಪ್ರಗತಿಯ ರಥವನ್ನು ಮುನ್ನಡೆಸು ತ್ತದೆ.ಅಂತಹ ರಾಜ್ಯ ಪ್ರಗತಿಯನ್ನು ಸಾಧಿಸುತ್ತದೆ.ರಾಜ್ಯ ಹಲವಾರು ರಂಗದಲ್ಲಿ ಹೆಸರು ಗಳಿಸಿದ್ದರೆ ಅದರಲ್ಲಿ ಸರ್ಕಾರಿ ನೌಕರರ ಪಾಲು ದೊಡ್ಡದಿದೆ ಎಂದರು.

ಇನ್ನೂ ಕರ್ನಾಟಕ ಪ್ರಗತಿಪರ ರಾಜ್ಯ.ಪ್ರಗತಿಪಥದಲ್ಲಿ ನಡೆ ಯಲು ಪ್ರಗತಿಪರ ಚಿಂತನೆ ನಾಯಕತ್ವ ಮತ್ತು ಆಡಳಿತ ವ್ಯವಸ್ಥೆ ಇರಬೇಕು.ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲು ಸರ್ಕಾರಿ ನೌಕರರ ಕರ್ತವ್ಯ ಬಹಳ ಮುಖ್ಯ.ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ ನಿಮ್ಮ ಕೆಲಸ ಬಡವನಿಗೆ ಮುಟ್ಟಿದರೆ ಪುಣ್ಯಪ್ರಾಪ್ತಿಯೂ ಆಗುತ್ತದೆ.ನಿಗದಿತ ಸಮಯದಲ್ಲಿ ಬಡವರಿಗಾಗಿ ಇರುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಆಸಕ್ತಿಯನ್ನು ವಹಿಸಬೇಕು.ಸರ್ಕಾರಿ ನೌಕರರು ಉತ್ತಮ ಸೇವೆ ಸಲ್ಲಿಸಿ ದರೆ ಅವರಿಗೆ ಸವಲತ್ತುಗಳನ್ನು ನೀಡಲು ಯಾವ ತೊಂದರೆ ಯೂ ಇಲ್ಲ ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಷಡಕ್ಷರಿಯವರ ನಾಯಕತ್ವದಿಂದ ಹೊಸ ಚೈತನ್ಯ ಬಂದಿದೆ. ಸಂಘದ ಹಿತಾಸಕ್ತಿಯನ್ನು ಕಾಪಾಡುವ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದಾರೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.